ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮರಗಳ್ಳರ ಪಾಲಾಗುತ್ತಿದೆ ಶ್ರೀ ಗಂಧ

First Published 11, Apr 2018, 2:00 PM IST
Sandawood Theft In Shivamogga
Highlights

ಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಕುವೆಂಪು ವಿವಿ ವ್ಯಾಪ್ತಿಯ ಅವರಣದಲ್ಲಿ ಯಥೇಚ್ಛವಾಗಿರುವ ಶ್ರೀಗಂಧದ ಮರಗಳು ಮರಗಳ್ಳರ ಪಾಲಾಗುತ್ತಿವೆ.

ಶಿವಮೊಗ್ಗ : ಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಕುವೆಂಪು ವಿವಿ ವ್ಯಾಪ್ತಿಯ ಅವರಣದಲ್ಲಿ ಯಥೇಚ್ಛವಾಗಿರುವ ಶ್ರೀಗಂಧದ ಮರಗಳು ಮರಗಳ್ಳರ ಪಾಲಾಗುತ್ತಿವೆ.

ರಾತ್ರೋರಾತ್ರಿ ಸದ್ದಿಲ್ಲದೇ ಬರುವ ಮರಗಳ್ಳರು ಬ್ಲೇಡ್ , ಗರಗಸ ಮೊದಲಾದವುಗಳನ್ನು ಬಳಸಿ ಬೆಲೆಬಾಳುವ ಶ್ರೀಗಂಧದ ಮರಗಳ ಮಾರಣ ಹೋಮ ನಡೆಸಿದ್ದಾರೆ.

ಮರಗಳ ತೊಗಟೆಯನ್ನು ತೆಗೆದು ಒಣಗುವಂತೆ ಮಾಡಿ ದಂಧೆಕೋರರು ನಂತರ ಅವುಗಳನ್ನು ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ.

ಕುವೆಂಪು ವಿವಿಯ ಅವರಣದಲ್ಲಿ 60 ಕ್ಕೂ ಹೆಚ್ಚು ಸಿಬ್ಬಂದಿಗಳು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರೂ ಶ್ರೀಗಂಧದ ಮರಗಳ ಕಳವು ಮಾತ್ರ ತಪ್ಪಿಲ್ಲ.

ನೈಸರ್ಗಿಕವಾಗಿ ಬೆಳೆದ 600 ಕ್ಕೂ ಶ್ರೀಗಂಧದ ಮರಗಳ ಪೈಕಿ ಅರ್ಧದಷ್ಟು ಮರಗಳು ಕಳ್ಳರ ಪಾಲಾಗಿರುವುದು ವಿವಿ ಸಿಬ್ಬಂದಿಗಳೇ ಶಾಮೀಲಾಗಿರುವ ಸಂಶಯ ಮೂಡಿಸಿದೆ.

ಹೀಗೆ ಶ್ರೀಗಂಧದ ಮರಗಳನ್ನು ಕಟಾವು ಮಾಡಿದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

loader