* ಸರಗಳ್ಳತನವು ಸ್ಯಾಂಡಲ್ವುಡ್ ನಿರ್ಮಾಪಕನ ಸೈಡ್ ಬ್ಯುಸಿನೆಸ್?* ಸರಗಳ್ಳತನ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ನಿರ್ಮಾಪಕ ಪ್ರತಾಪ್ ರಂಗು* 'ಡಬಲ್ ಮೀನಿಂಗ್' ಸಿನಿಮಾ ನಿರ್ಮಾಣ ಮಾಡಿದ್ದ ಪ್ರತಾಪ್* 15 ದಿನಗಳ ಹಿಂದೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿಯಾಗಿದ್ದ ರಂಗು

ಬೆಂಗಳೂರು(ಅ. 28): ಸಿನಿಮಾ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡೋದನ್ನ ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ನಿರ್ಮಾಪಕ ಸರಕಳ್ಳತನ ಮಾಡಿದ್ದಾನೆ. ಸ್ಯಾಂಡಲ್ವುಡ್​'ನ ಫಿಲಂ ಪ್ರೊಡ್ಯೂಸರ್ ಪ್ರತಾಪ್​ ರಂಗು ಅಲಿಯಾಸ್ ರಂಗ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಪ್ರತಾಪ್ ರಂಗುನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

15 ದಿನಗಳ ಹಿಂದಷ್ಟೇ ಈತ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಕೂದಲೆಳೆ ಅಂತರದಲ್ಲಿ ಠಾಣೆಯಿಂದಲೇ ಎಸ್ಕೇಪ್ ಆಗಿದ್ದ. ಆ ಬಳಿಕ ಆನಂತಪುರ ಜಿಲ್ಲೆಯ ಮಡಕಸೀರಾದಲ್ಲಿ ಈತ ತಲೆಮರೆಸಿಕೊಂಡಿರುತ್ತಾನೆ. ನಿನ್ನೆ ಸಂಜೆ ವಿಧಾನಸೌಧ ಸಮೀಪದ ಎಂಎಸ್​ ಬಿಲ್ಡಿಂಗ್ ಬಳಿ ಈತ ಇರುವ ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಪ್ರತಾಪ್'ನನ್ನು ಹಿಡಿಯುತ್ತಾರೆ.

ಈತ ಬಸವೇಶ್ವರನಗರ, ಮಹಾಲಕ್ಷ್ಮಿಲೇಔಟ್ ಸುತ್ತಮುತ್ತ ಸರಗಳ್ಳತನ ಮಾಡುತ್ತಿದ್ದು, ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯು ‘ಡಬಲ್ ಮೀನಿಂಗ್ ’ ಎಂಬ ಚಿತ್ರದ ಸಿನಿಮಾ ನಿರ್ಮಾಪಕನಾಗಿದ್ದಾನೆ.