Asianet Suvarna News Asianet Suvarna News

ಮರಳು ಮಾಫಿಯಾಗೆ ಬರಿದಾಗುತ್ತಿದೆ ತುಂಗಭದ್ರೆ ಒಡಲು;ಕಣ್ಣಿದ್ದೂ ಕುರುಡಾಗಿದೆಯಾ ಗದಗ ಜಿಲ್ಲಾಡಳಿತ

ಗದಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ದಂಧೆಕೋರರ ಕೈಗೆ ಸಿಲುಕಿ ತುಂಗೆಯ ಒಡಲು ಬರಿದಾಗುತ್ತಿದೆ. ಇಷ್ಟೆಲ್ಲಾ ಅಕ್ರಮ ಕಣ್ಮುಂದೆ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಅಷ್ಟೆ ಅಲ್ಲ ಅಕ್ರಮ ಮರಳು ತುಂಬಿದ್ದ ಲಾರಿಗಳಿಗೆ ಪೊಲೀಸ್ ಠಾಣೆಯೇ ಪಾರ್ಕಿಂಗ್ ಆಗಿದೆ.

Sand Mafia In Gadaga

ಗದಗ (ಮಾ.25): ಗದಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ದಂಧೆಕೋರರ ಕೈಗೆ ಸಿಲುಕಿ ತುಂಗೆಯ ಒಡಲು ಬರಿದಾಗುತ್ತಿದೆ. ಇಷ್ಟೆಲ್ಲಾ ಅಕ್ರಮ ಕಣ್ಮುಂದೆ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಅಷ್ಟೆ ಅಲ್ಲ ಅಕ್ರಮ ಮರಳು ತುಂಬಿದ್ದ ಲಾರಿಗಳಿಗೆ ಪೊಲೀಸ್ ಠಾಣೆಯೇ ಪಾರ್ಕಿಂಗ್ ಆಗಿದೆ.

ತುಂಗಾಭದ್ರ ನದಿ ತಟದಲ್ಲಿರುವ ಮುಂಡರಗಿ, ಹೆಸರೂರ, ಕಕ್ಕೂರ ತಾಂಡಾ, ರಾಮೇನಹಳ್ಳಿ, ಹಮ್ಮಿಗಿ, ಸಿಂಗಟಾಲೂರ ಸೇರಿದಂತೆ ಹಲವೆಡೆ ಮರಳು ಸಾಗಿಸಲಾಗುತ್ತಿದೆ. ವಿಪರ್ಯಾಸ ಅಂದ್ರೆ ಮರಳು ತುಂಬಿದ ಲಾರಿಗಳು ಪೊಲೀಸ್ ಠಾಣೆ ಎದುರೇ ನಿಂತರೂ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಗಾಢನಿದ್ರೆಯಲ್ಲಿರುತ್ತಾರೆ. ಈ ಅಕ್ರಮ ದಂಧೆಗೆ ಮುಂಡರಗಿ ಸಿಪಿಐ ಮಂಜುನಾಥ ನಡುವಿನ ಮನಿ ಸಾಥ್ ಇದೆ ಅನ್ನೋ ಆರೋಪ ಕೇಳಿಬಂದಿದೆ. ಇನ್ನು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲೇ ನೂರಾರು ಲಾರಿಗಳು ಮರಳು ಹೇರಿಕೊಂಡು ನಿಂತಿದ್ರೆ, ಇತ್ತ ಪೊಲೀಸ್ರು ಮಾತ್ರ ಪೊಲೀಸ್ ಠಾಣೆಗೆ ಬೀಗ ಹಾಕಿಕೊಂಡ ಗಡದ್ ನಿದ್ರೆಯಲ್ಲಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ ಮಾರ್ಚ್ 23ರಂದು ಸೀಜ್ ಮಾಡಿರೋದು ಅಕ್ರಮವಾಗಿ ಜಮೀನಿನಲ್ಲಿ ಸಂಗ್ರಹಿಸಿದ 52 ಟ್ರಿಪ್ ಮರಳು ಲೋಡ್ ಮಾತ್ರ. ಆದರೆ ನೂರಾರು ಲಾರಿಗಳ ಮರಳು ತುಂಬಿಕೊಂಡು ಹೇಗೆ ನಿಂತಿವೆ ಎಂಬ ಪ್ರಶ್ನೆ ಉದ್ಭವಿಸುತ್ತೆ. ಲಾರಿ ಸಮೇತ ಮರಳು ಸಿಕ್ಕರೆ ಕೇಸ್ ಮಾಡಲೇಬೇಕು ಅನ್ನೋದು ಗಣಿ ಇಲಾಖೆ ಅಧಿಕಾರಿಗಳ ಮಾತು. ಆದ್ರೆ, ಪೊಲೀಸರು ಮಾತ್ರ ಪ್ರಕರಣ ದಾಖಲಿಸಿಲ್ಲ.

Follow Us:
Download App:
  • android
  • ios