ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತಮ್ಮನ್ನು ಸುಖಾಸುಮ್ಮನೇ ಎಳೆದು ತರಲಾಗುತ್ತಿದೆ ಎಂದು ಗೋವಾ ಮೂಲದ ಬಲ ಪಂಥೀಯ ಸಂಘಟನೆಯಾದ ಸನಾತನ ಸಂಸ್ಥಾ ಅಸಮಾಧಾನ ವ್ಯಕ್ತಪಡಿಸಿದೆ.
ಪಣಜಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತಮ್ಮನ್ನು ಸುಖಾಸುಮ್ಮನೇ ಎಳೆದು ತರಲಾಗುತ್ತಿದೆ ಎಂದು ಗೋವಾ ಮೂಲದ ಬಲ ಪಂಥೀಯ ಸಂಘಟನೆಯಾದ ಸನಾತನ ಸಂಸ್ಥಾ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೆ, ಗೌರಿ ಹತ್ಯೆಯ ತನಿಖೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೆಲವು ಹಿಂದೂ ವಿರೋಧಿ ಶಕ್ತಿಗಳು ತಮ್ಮ ವಿರುದ್ಧ ಆರೋಪ ಮಾಡುತ್ತಿವೆ ಎಂದು ಸನಾತನ ಸಂಸ್ಥಾ ದೂರಿದೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ ಸನಾತನ ಸಂಸ್ಥಾ ವಕ್ತಾರ ಚೇತನ್ ರಾಜಹನ್ಸ್, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಕೆಲ ಶಕ್ತಿಗಳು ಯತ್ನ ಮಾಡುತ್ತಿವೆ ಎಂದರು.
