ಸಿಂಗಾಪುರ್`ನಿಂದ ಆಗಮಿಸಿದ್ದ ವಿಮಾನ ಚೆನ್ನೈನಲ್ಲಿ ಲ್ಯಾಂಡಿಂಗ್ ವೇಳೆ ಕಾಣಿಸಿಕೊಂಡ ಬೆಂಕಿ
ಚೆನ್ನೈ(ಸೆ.23): ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-2 ಮೊಬೈಲ್`ಗೆ ಇದ್ದಕ್ಕಿಂದ್ದಂತೆ ಬೆಂಕಿ ಹೊತ್ತಿ ಉರಿದ ಘಟನೆ ಇಂಡಿಗೋ ಏರ್`ಕ್ರಾಫ್ಟ್`ನಲ್ಲಿ ನಡೆದಿದೆ. ಸಿಂಗಾಪುರ್`ನಿಂದ ಆಗಮಿಸಿದ್ದ ವಿಮಾನ ಚೆನ್ನೈನಲ್ಲಿ ಲ್ಯಾಂಡಿಂಗ್ ವೇಳೆ ಈ ಘಟನೆ ನಡೆದಿದೆ. ಕೂಡಲೇ ಕಂಪನಿಯ ಅಧಿಕಾರಿಗಳನ್ನ ಕರೆಸಿಕೊಂಡ ಡಿಜಿಸಿಎ ಅಧಿಕಾರಿಗಳು ಈ ಸೀರಿಸ್`ನ ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
2 ವಾರಗಳ ಹಿಂದಷ್ಟೇ ಸ್ಯಾಮ್`ಸಂಗ್ ಗ್ಯಾಲಕ್ಸಿ ನೋಟ್-7 ಮೊಬೈಲ್`ಗಳ ಬ್ಯಾಟರಿ ಸ್ಫೋಟಗೊಂಡ ದೂರುಗಳು ಬಮದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-2ಗೆ ವಿಮಾನದಲ್ಲೇ ಬೆಂಕಿ ಹೊತ್ತಿಕೊಂಡಿರುವುದು ಪ್ರಾಡಕ್ಟ್ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಮೂಡಿಸಿದೆ.
ಕೃಪೆ: ಎನ್`ಡಿಟಿವಿ
