ಹೈದರಾಬಾದ್[ಆ.29]: ನಂದಮೂರಿ ಕುಟುಂಬಕ್ಕೆ ತಮ್ಮ ಕಾರಿಗೆ ಒಂದೇ ನಂಬರ್ ಬಳಸೋ ಅಭ್ಯಾಸ ಮೊದಲಿನಿಂದಲೂ ಇದೆ.  ಹೈದರಾಬಾದಿನಲ್ಲಿ 2323 ಸಂಖ್ಯೆಯ ಕಾರ್ ಹೋದ್ರೆ, ಅದು ಎನ್ಟಿಆರ್ ಕುಟುಂಬದ್ದು ಎನ್ನುವಷ್ಟು ಚಿರಪರಿಚಿತ. ಆದರೆ, ಅದೇ ನಂಬರಿನ ಕಾರು ಎರಡು ಸಾವಿಗೆ ಸಾಕ್ಷಿಯಾಗಿದ್ದು ಮಾತ್ರ ದುರಂತ.

ಒಂದೇ ಹೆದ್ದಾರಿ.. ಒಂದೇ ನಂಬರ್.. ಎರಡು ಸಾವು..!
ಹೀಗೊಂದು ಪ್ರಶ್ನೇ ಉದ್ಭವವಾಗಿದ್ದು, ನಂದಮುರಿ ಹರಿಕೃಷ್ಣ ಹಾಗೂ ಪುತ್ರ ಜಾನಕಿರಾಮ್ ಅಪಘಾತಕ್ಕಿಡಾದ ಕಾರಿನ ಸಂಖ್ಯೆ ನೋಡಿದ ಬಳಿಕ. ಯಾಕಂದರೆ  ಎನ್'ಟಿಆರ್ ಕುಡಿಗಳಾದ ಇಬ್ಬರು ಮೃತಪಟ್ಟ ಹೆದ್ದಾರಿಯೂ ಒಂದೇ. ಅಪಘಾತಕ್ಕೀಡಾದ ತಂದೆ, ಮಗನ ಕಾರಿನ ಕೊನೆಯ ಸಂಖ್ಯೆ ಕೂಡ ಸೇಮ್. ಅದೇ 2323 ಅಂದಹಾಗೇ 2014ರ ಡಿಸೆಂಬರ್ 6ರಂದು ನಂದಮೂರಿ ಹರಿಕೃಷ್ಣರ ಹಿರಿಯ ಪುತ್ರ ಜಾನಕಿರಾಮ್ ನಲ್ಗೊಂಡದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಕಾರ್ ನಂಬರ್ 2323.

ಇಂದು ಅಪಘಾತಕ್ಕೀಡಾದ ನಂದಮುರಿ ಹರಿಕೃಷ್ಣ ಅವರ ಕಾರ್ ನಂಬರ್ ಕೂಡ 2323. ಇದು ಕಾಕತಾಳಿಯವೋ ಅಥವಾ ಕುಟುಂಬಕ್ಕೆ ಈ ನಂಬರ್ ಆಗಿ ಬರಲಿಲ್ಲವೋ ಅನ್ನೋ ಚರ್ಚೆ ಶುರುವಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮತ್ತೊಂದು ವಿಚಾರ ಸದ್ದು ಮಾಡ್ತಿದೆ. ಎನ್ಟಿಆರ್ ಕುಟುಂಬಕ್ಕೆ ನಲ್ಗೊಂಡ ಹೆದ್ದಾರಿ ಕಂಟಕವಾಗಿದೆ. ಹೀಗಾಗಿಯೇ ತಂದೆ ಮಗನ ಸಾವು ಒಂದೇ ದಾರಿಯಲ್ಲಿ ನಡೆದಿದೆ. ಇದೂ ಕೂಡ ಹಲವು ಪ್ರಶ್ನೆ ಹುಟ್ಟುಹಾಕಿದೆ.