ಮಾಯಾವತಿ ಬಳಿಕ ಕಾಂಗ್ರೆಸ್ ಗೆ ಶಾಕ್ ನೀಡಲು ಮತ್ತೊಂದು ಪಕ್ಷ ಮುಂದಾಗಿದೆ. ಮಹಾಘಟಬಂಧನ್ ದಿಂದ ಸಮಾಜವಾದಿ ಪಕ್ಷ ಕೂಡ ಮತ್ರಿ ಕಡಿದುಕೊಳ್ಳುವ ಸುಳಿವು ನೀಡಿದೆ. 

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮಹಾಘಟಬಂಧನ್‌ದಿಂದ ಹೊರಬಂದ ಬೆನ್ನಲ್ಲೇ, ಸಮಾಜವಾದಿ ಪಕ್ಷ ಕೂಡ ಮತ್ರಿ ಕಡಿದುಕೊಳ್ಳುವ ಸುಳಿವು ನೀಡಿದೆ. 

ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ಮಹಾ ಮೈತ್ರಿಗೆ ಮುಗಿಬಿದ್ದಿರುವುದನ್ನು ಪ್ರಶ್ನಿಸಿರುವ ಸಮಾಜವಾದಿ ಪಕ್ಷ, ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 

ಇನ್ನೊಂದೆಡೆ ಬಿಎಸ್‌ಪಿ ಈಗಾಗಲೇ 22 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಉತ್ತರ ಪ್ರದೇಶಕ್ಕೆ ಹೊಂದಿಕೊಂಡಿರುವ ಮಧ್ಯ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ಸಮಾಜವಾದಿ ಪಕ್ಷ ಜನ ಬೆಂಬಲವನ್ನು ಹೊಂದಿದ್ದು, ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸೆ.29 ಮತ್ತು 30ರಂದು ರಾರ‍ಯಲಿಗಳನ್ನು ಕೈಗೊಳ್ಳಲಿದ್ದಾರೆ. ಇದೇ ವೇಳೆ ಇತರ ಪಕ್ಷಗಳ ಜೊತೆಗೂಡಿ ಮಹಾಮೈತ್ರಿಕೂಟ ರಚಿಸುವ ವಿಶ್ವಾಸವನ್ನು ಕಾಂಗ್ರೆಸ್‌ ಹೊಂದಿದೆ.