ಸಲ್ಮಾನ್‌ಗೂ ರಸ್ತೆಗೂ ಆಗಿಬರಲ್ಲ.. ಈ ಬಾರಿ ಖಾನ್ ಏನ್ ಮಾಡಿದ್ರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 10:27 PM IST
Salman Khan's family member, Kapil Sharma among repeat traffic offenders
Highlights

ರಸ್ತೆ ಅಪಘಾತಗಳು ಎಂದಾಗ ಅದರ ಜತೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರು ಕೇಳಿ ಬರುವುದು ಸಾಮಾನ್ಯ ಎಂಬ ಕಾಲವೊಂದಿತ್ತು. ಇದೀಗ ಮತ್ತೆ ಆ ಸತ್ಯ ಸಾಬೀತಾಗಿದೆ. ಆದರೆ ಇಲ್ಲಿ ಸಲ್ಮಾನ್ ಗಿಂತ ಸಲ್ಮಾನ್ ಕುಟುಂಬದವರ ಪಾಲು ದೊಡ್ಡದಿದೆ.

ಮುಂಬೈ[ಆ.11] ಟ್ರಾಫಿಕ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಮೂವರ ಸೆಲೆಬ್ರಿಟಿಗಳ ಹೆಸರು ಕೇಳಿ  ಬಂದಿದೆ. ದಂಡ ಕಟ್ಟದ ಕಾರಣಕ್ಕೆ ಅವರ ಹೆಸರು ಮುಂಚೂಣಿಗೆ ಬಂದಿದೆ. ಬಾಲಿವುಡ್ ನಟ ಅರ್ಜುನ್ ಕಪೂರ್, ಕಪಿಲ್ ಶರ್ಮಾ ಮತ್ತು ಸಲ್ಮಾನ್ ಖಾನ್ ಕುಟುಂಬದ ಸದಸ್ಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. ಬಹಳ ದೀರ್ಘ ಕಾಲದಿಂದ ದಂಡ ಸಹ ಕಟ್ಟಿಲ್ಲ.

119 ಕೋಟಿ ರು. ಗೂ ಅಧಿಕ ಹಣ ಮುಂಬೈ ಪೊಲೀಸರಿಗೆ ದಂಡದ ರೂಪದಲ್ಲಿ ಬರಬೇಕಿದೆ. ಓವರ್ ಸ್ಪೀಡ್, ಸಿಗ್ನಲ್ ಜಂಪ್, ನೋ ಎಂಟ್ರಿ ಸಂಚಾರ ಎಲ್ಲವೂ ಇದರಲ್ಲಿ ಸೇರುತ್ತದೆ. ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಗೆ ಸೇರಿದ ಕಾರ್ ನಾಲ್ಕು ಬಾರಿ ಟ್ರಾಫಿಕ್ ನಿಯಮಮ ಉಲ್ಲಂಘಿಸಿದ್ದು 4000 ರೂ.ಗೂ ಅಧಿಕ ದಂಡ ಕಟ್ಟಬೇಕಾಗಿದೆ.

ಕಪಿಲ್ ಶರ್ಮಾ 2000 ರೂ. ದಂಡ ಕಟ್ಟಬೇಕು. ಬಿಜೆಪಿ ನಾಯಕ ದಿವಾಕರ್ ರಾವತ್, ಎನ್ ಸಿಪಿ ನಾಯಕ ಅಜಿತ್ ಪವಾರ್ ಸಹ ದಂಡ ಬಾಕಿ ಇಟ್ಟುಕೊಂಡಿದ್ದಾರೆ.

loader