[ಸುಳ್ ಸುದ್ದಿ ]ಸಲ್ಮಾನ್ ಮೇಲೆ ಲೇಸರ್ ಲೈಟ್ ಬಿಟ್ಟ ಅಸರಾಂ ಬಾಪು

First Published 6, Apr 2018, 11:46 AM IST
Salman Khan In Jail
Highlights

ಕೃಷ್ಣಮೃಗಗಳನ್ನು ಕೊಂದು ಜೈಲಿಗೆ ಹೋಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ಇಲ್ಲಿನ ಜೈಲಿನಲ್ಲಿ ಆಸಾರಾಂ ಬಾಪು ಸಮೀಪದ ಕೋಣೆಯಲ್ಲಿ ಇರಿಸಲಾಗಿದೆ.

ಜೋಧ್’ಪುರ : ಕೃಷ್ಣಮೃಗಗಳನ್ನು ಕೊಂದು ಜೈಲಿಗೆ ಹೋಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ಇಲ್ಲಿನ ಜೈಲಿನಲ್ಲಿ ಆಸಾರಾಂ ಬಾಪು ಸಮೀಪದ ಕೋಣೆಯಲ್ಲಿ ಇರಿಸಲಾಗಿದೆ.

ಆಸಾರಾಂ ಬಾಪು ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಹೋದವರು. ಅವರು ರಾತ್ರಿ ವೇಳೆ ಸಲ್ಮಾನ್ ಮೇಲೆ ಲೇಸರ್ ಟಾರ್ಚ್‌ನಿಂದ ಬೆಳಕು ಬಿಟ್ಟಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಧ್ಯರಾತ್ರಿಯೇ ಸಲ್ಮಾನ್ ಜೈಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಹಿಂದೆ ಆಸಾರಾಂ ಬಾಪು ತಮ್ಮ ಆಶ್ರಮದಲ್ಲಿ ಭಜನೆ ಮಾಡುವ ಯುವತಿಯರ ಮೇಲೆ ಲೇಸರ್ ಬೆಳಕು ಬಿಟ್ಟು  ವರಲ್ಲೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಿ ದ್ದರು.

ಇದನ್ನು ತಿಳಿದಿರುವ ಸಲ್ಮಾನ್ ಈಗ ಕಂಗಾಲಾಗಿದ್ದಾರೆ ಎನ್ನಲಾಗಿದೆ. ಆದರೆ, ಆಸಾರಾಂ ತಮ್ಮ ಟಾರ್ಚ್ ರಿಪೇರಿ ಮಾಡುವಾಗ ಅಕಸ್ಮಾತ್ ಬೆಳಕು ಹೊರಬಂದಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

loader