ಅನಾರೋಗ್ಯದಿಂದ ಆರ್ಥಿಕ ದುಸ್ಥಿತಿಯಲ್ಲಿರುವ ತಮ್ಮೊಂದಿಗೆ ನಟಿಸಿದ್ದ ಪೂಜಾಗೆ ಸಲ್ಮಾನ್ ಖಾನ್ ನೆರವು

Salman Khan extends help to ailing Veergati co star Pooja Dadwal
Highlights

1990ರ ದಶಕದ ಚಲನಚಿತ್ರವಾದ ‘ವೀರಗತಿ’ಯಲ್ಲಿ ಖ್ಯಾತನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಮಾಜಿ ನಟಿ ಪೂಜಾ ದಾದ್ವಾಲ್, ಈಗ ಕ್ಷಯರೋಗ ಮತ್ತು ಶ್ವಾಸಕೋಶದ ಸಂಬಂಧಿ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ಆರ್ಥಿಕವಾಗಿ ತೀರಾ ದುಸ್ಥಿಯಲ್ಲಿರುವ ಈಕೆಗೆ ಇದೀಗ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಆಸ್ಪತ್ರೆಗೆ ತೆರಳಿ ಅಗತ್ಯ ನೆರವು ನೀಡುವುದಾಗಿ ಅವರು ಹೇಳಿದ್ದಾರೆ.

ನವದೆಹಲಿ : 1990ರ ದಶಕದ ಚಲನಚಿತ್ರವಾದ ‘ವೀರಗತಿ’ಯಲ್ಲಿ ಖ್ಯಾತನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಮಾಜಿ ನಟಿ ಪೂಜಾ ದಾದ್ವಾಲ್, ಈಗ ಕ್ಷಯರೋಗ ಮತ್ತು ಶ್ವಾಸಕೋಶದ ಸಂಬಂಧಿ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ಆರ್ಥಿಕವಾಗಿ ತೀರಾ ದುಸ್ಥಿಯಲ್ಲಿರುವ ಈಕೆಗೆ ಇದೀಗ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಆಸ್ಪತ್ರೆಗೆ ತೆರಳಿ ಅಗತ್ಯ ನೆರವು ನೀಡುವುದಾಗಿ ಅವರು ಹೇಳಿದ್ದಾರೆ.

ಪೂಜಾ ದಾದ್ವಾಲ್’ರನ್ನು ಮುಂಬೈಯ ಸೆವಿರಿ ಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಅವಳ ಪತಿ ಮತ್ತು ಕುಟುಂಬದ ಸದಸ್ಯರು ಅವಳಿಂದ ದೂರ ಸರಿದಿದ್ದಾರೆ.

ಹೀಗಾಗಿ ತನ್ನನ್ನು ತಾನು ಉಳಿಸಿಕೊಳ್ಳಲು ಹಣವಿಲ್ಲದೆ, ನಟಿ ಪೂಜಾ ದಾದ್ವಾಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಹೀಗಾಗಿ ಪೂಜಾ ಹಿಂದೆ ತನ್ನ ಜೊತೆ ನಟಿಸಿದ್ದ ನಟ ಸಲ್ಮಾನ್ ಖಾನ್​ರಿಂದ ಸಹಾಯ ಕೋರಿದ್ದರು. ‘ಚಾರಿಟಿ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಸಂಸ್ಥಾಪಕರಾಗಿರುವ ಸಲ್ಮಾನ್ ಖಾನ್ ಭಾರತದಲ್ಲಿ ಶಿಕ್ಷಣ & ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.

ಹೀಗಾಗಿ ನನ್ನ ಈ ಸ್ಥಿತಿ ನೋಡಿದರೆ ಖಂಡಿತವಾಗಿಯೂ ನನಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಅದರಂತೆ ಇದೀಗ ಪೂಜಾಗೆ ಸಲ್ಮಾನ್ ಖಾನ್ ನೆರವು ನೀಡಲು ಮುಂದಾಗಿದ್ದಾರೆ.

 

loader