ಕಾಶ್ಮೀರ ಗಡಿ ಪ್ರದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ  ಭಾರತ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ನಟ ಸಲ್ಮಾನ್ ಖಾನ್ ಒಲವು ತೋರಿದ್ದಾರೆ.

ನವದೆಹಲಿ (ಜೂ.14): ಕಾಶ್ಮೀರ ಗಡಿ ಪ್ರದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಾರತ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ನಟ ಸಲ್ಮಾನ್ ಖಾನ್ ಒಲವು ತೋರಿದ್ದಾರೆ.

ಯುದ್ಧದ ಬಗ್ಗೆ ಯಾರು ಮಾತನಾಡುತ್ತಾರೋ ಅವರನ್ನು ಗಡಿ ಪ್ರದೇಶಗಳಿಗೆ ಕಳುಹಿಸಬೇಕು. ಅವರ ಕೈಕಾಲುಗಳು ನಡುಗಿ ಹೋಗುತ್ತವೆ. ಕೇವಲ ಒಂದೇ ದಿನದಲ್ಲಿ ಯುದ್ಧ ಮುಗಿದು ಹೋಗುತ್ತದೆ. ನಂತರ ಅವರು ಮಾತುಕತೆ ನಡೆಸಲು ಟೇಬಲ್ ಗೆ ಬರುತ್ತಾರೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಯುದ್ಧದಿಂದ ಕೇವಲ ಒಂದು ದೇಶದ ಜನರು ಸಾಯುವುದಿಲ್ಲ. ಎರಡೂ ಕಡೆಯವರು ಸಾಯುತ್ತಾರೆ. ದ್ವಿಪಕ್ಷೀಯ ಮಾತುಕತೆ ಹಾಗೂ ಶಾಂತಿ ಸಂಧಾನವೇ ಎರಡೂ ದೇಶಗಳ ಮುಂದಿರುವ ದಾರಿ ಎಂದಿದ್ದಾರೆ.