Asianet Suvarna News Asianet Suvarna News

ಪಾನೀಪೂರಿ ಮಾರಾಟಕ್ಕೆ ನಿಷೇಧ

ಜನರ ಆರೋಗ್ಯದ ದೃಷ್ಟಿಯಿಂದ ಪಾನಿಪೂರಿ ಹಾಗೂ ಗೋಲ್ ಗಪ್ಪಾ ಮಾರಾಟಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. 

Sale of panipuri banned in Vadodara
Author
Bengaluru, First Published Jul 28, 2018, 11:38 AM IST

ವಡೋದರ :  ಪಾನೀಪುರಿ ಅಂದರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತದೆ. ಆದರೆ, ಅವುಗಳನ್ನು ತಯಾರಿಸುವಾಗ ಬೀದಿ ಬದಿ ವ್ಯಾಪಾರಿಗಳು  ಸ್ವಚ್ಛತೆ ಯನ್ನು ಕಾಪಾಡದೇ ಇರುವ ಕಾರಣಕ್ಕೆ ಗುಜರಾತಿನ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಪಾನೀಪುರಿ ಅಥವಾ ಗೋಲ್ಗಪ್ಪಾ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ. 

ಮಳೆಗಾಲದಲ್ಲಿ ಜನರು ರಸ್ತೆ ಬದಿಯ ಪಾನೀಪುರಿಗಳನ್ನು ಸೇವಿಸಿ ಟೈಫಾಯ್ಡ್, ಜಾಂಡೀಸ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸುಮಾರು 50  ಪಾನೀಪುರಿ ಅಂಡಿಗಳ ಮೇಲೆ ದಾಳಿ ನಡೆಸಿ 4,000 ಕೆ.ಜಿ. ಪುರಿ, 3,500 ಕೆ.ಜಿ. ಕೊಳೆತ ಆಲೂಗಡ್ಡೆ ಹಾಗೂ ಕಾಬೂಲ್ ಕಡಲೆ ಹಾಗೂ 1,200 ಪಾನಿಯನ್ನು ಅಧಿಕಾರಿಗಳು ಚರಂಡಿಗೆ ಚೆಲ್ಲಿದ್ದಾರೆ.

Follow Us:
Download App:
  • android
  • ios