ಮೈಸೂರು (ಸೆ.22): ಅಕ್ಟೋ 1 ರಿಂದ ಪ್ರಾರಂಭವಾಗಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ.

ದಸರಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಕೆಳಕಂಡ ದಿನದಂದು ನಿಗದಿತ ಸಮಯಕ್ಕೆ ಈ ನಿರ್ಬಂಧ ಹೇರಲಾಗಿದೆ.

ಅಕ್ಟೋಬರ್ 11ರಂದು ಇಡೀ ದಿನ ನಿಷೇಧ 

ಸೆಪ್ಟಂಬರ್​ 25ರಂದು ಮಧ್ಯಾಹ್ನ 1.30ರವರೆಗೆ 

ಅಕ್ಟೋಬರ್ 1ರ ಮಧ್ಯಾಹ್ನ 2.30ರವರೆಗೆ

ಅಕ್ಟೋಬರ್ 10ರ ಮಧ್ಯಾಹ್ನ 1.30ರವರೆಗೆ

ಅಕ್ಟೋಬರ್​ 20ರ ಮಧ್ಯಾಹ್ನದವರೆಗೆ ನಿರ್ಬಂಧ ಎಂದು ಅರಮನೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.