ಕೇಸರಿಮಯವಾಗಿದ್ದ ಅಂಬೇಡ್ಕರ್ ಪ್ರತಿಮೆ ನೀಲಿ ಬಣ್ಣಕ್ಕೆ

First Published 11, Apr 2018, 1:41 PM IST
Saffron Ambedkar turns Blue Again
Highlights

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಕೇಸರಿಮಯಗೊಂಡು ಅನಾವರಣವಾಗಿದ್ದ ಅಂಬೇಡ್ಕರ್ ಪ್ರತಿಮೆ ಇದೀಗ ನೀಲಿ ಬಣ್ಣ ಪಡೆದುಕೊಂಡಿದೆ.

ಬದೌನ್: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಕೇಸರಿಮಯಗೊಂಡು ಅನಾವರಣವಾಗಿದ್ದ ಅಂಬೇಡ್ಕರ್ ಪ್ರತಿಮೆ ಇದೀಗ ನೀಲಿ ಬಣ್ಣ ಪಡೆದುಕೊಂಡಿದೆ. ಇತ್ತೀಚೆಗೆ ದುಗ್ರೈಯ್ಯ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸ ಪ್ರತಿಮೆ ಪ್ರತಿಷ್ಠಾಪಿಸಿತ್ತು. ಹೊಸ ಪ್ರತಿಮೆ ಪೂರ್ಣ ಕೇಸರಿಬಣ್ಣದಿಂದ ತುಂಬಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಬಿಎಸ್ಪಿ ನಾಯಕರು ಮಂಗಳವಾರ ಪ್ರತಿಮೆಗೆ ನೀಲಿ ಬಣ್ಣ ಬಳಿದಿದ್ದಾರೆ.

loader