ಮಂಡ್ಯ: ನಾಲೆಗಳಿಗೆ ಬಿದ್ದು ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ನಾಲೆಗಳಿಗೆ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌ .ಪುಟ್ಟರಾಜು ಸೋಮವಾರ ತಿಳಿಸಿದರು. 

ಲೋಕಸರ ಗ್ರಾಮದಲ್ಲಿ ಬೈಕ್‌ನಿಂದ ನಾಲೆಗೆ ಬಿದ್ದು ಮೃತಪಟ್ಟಮೂವರ ಕುಟುಂಬ ವರ್ಗದವರಿಗೆ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆಯಂತೆ ಕೆರೆ ಮತ್ತು ನಾಲಾ ರಸ್ತೆಗಳಿರುವ ಕಡೆ ತಡೆಗೋಡೆ ನಿರ್ಮಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಪಡೆಯಲು ಎಲ್ಲರಿಗೂ ಅವಕಾಶ ಇದೆ. ಅದೇ ರೀತಿ ಬೇರೆ ಪಕ್ಷದ ಶಾಸಕರನ್ನು ಕರೆತರುವ ತಾಕತ್ತು ಇರುವುದು ಮಾತ್ರ ಜೆಡಿಎಸ್‌ಗೆ ಇದೆ. ಬಿಜೆಪಿಯವರು ಮುಂದಿನ ನಡೆ ನೋಡಿಕೊಂಡು ಬಳಿಕ ನಾವೇನು ಮಾಡುತ್ತೇವೆ ಎಂದು ತೋರಿಸುತ್ತೇವೆ.

ಸಿ.ಎಸ್‌.ಪುಟ್ಟರಾಜು, ಸಚಿವ