ಹುಳಿಯಾರಿನ ಕೋಡಿಪಾಳ್ಯದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಂಕಾಳಿ ಹಾಗೂ ತುಳಜಾ ಭವಾನಿ ದೇವಸ್ಥಾನದ ಲೋಕಾರ್ಪಣಾ ಮಹೋತ್ಸವಕ್ಕೆ ಹಿಮಾಲಯದಿಂದ 20 ಮಂದಿ ನಾಗಸಾಧುಗಳು ಆಗಮಿಸಿದ್ದು ಇವರ ಮುಖ್ಯಸ್ಥ ಕಪಾಲಿ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ ಪಂಚಾಂಗ ಹಿಡಿದು ದೇಶದ ಭವಿಷ್ಯ ನುಡಿದಿದ್ದಾರೆ.
ಹುಳಿಯಾರು:

2015ರಲ್ಲಿ ಮಳೆ ಬರುವುದಾಗಿ ಹೇಳಿದ್ದೆ ಅದ ರಂತೆ ಉತ್ತಮ ಮಳೆ ಆಗಿದೆ. ಆದರೆ 2017ರಲ್ಲಿ ಬುಧರಾಜನಾಗಿ ಗುರು ಮಂತ್ರಿಯಾಗಿದ್ದು ಬೆಂಕಿ ಅವಘಡ ಸಂಭವಿಸುವ, ಖಾಯಿಲೆಗಳು ಹೆಚ್ಚಾಗುವ ದೇಶದ ನೇತಾರರೊಬ್ಬರು ಸಾವನ್ನಪ್ಪುವ ಸಂಭವವಿದೆ. ಜೂ.24ರಿಂದ ಜು.9ರೊಳಗೆ ಈ ಅವಘಡ ಸಂಭವಿಸಲಿದ್ದು ರಾಜನೊಬ್ಬ ಸಾವನ್ನಪ್ಪುತ್ತಾರೆ ಎಂದ ರಲ್ಲದೆ 2021 ಮತ್ತು 27ರಲ್ಲಿ ಅತಿವೃಷ್ಠಿಯಾಗಲಿದೆ ಎಂದಿದ್ದಾರೆ.