ಅಕ್ರಮ ಸಂಬಂಧ ಆರೋಪ ಹೊರಿಸಿದ್ದಕ್ಕೆ ಮನನೊಂದ  ಸಾಧು ಒಬ್ಬರು ಮಾಡಿದ್ದೇನು ಗೊತ್ತಾ..? 

ಲಕ್ನೋ, [ಅ.19]: ಅಕ್ರಮ ಸಂಬಂಧ ಆರೋಪ ಹೊರಿಸಿದ್ದಕ್ಕೆ ಮನನೊಂದ ಉತ್ತರಪ್ರದೇಶದ ಸಾಧು ಒಬ್ಬರು ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 

ಉತ್ತರ ಪ್ರದೇಶದ ಬಾಮ್ನಾ ಜಿಲ್ಲೆಯಲ್ಲಿ ನಡೆದಿದ್ದು, ಮದನಿ ಬಾಬಾ ಮರ್ಮಾಂಗ ಕತ್ತರಿಸಿಕೊಂಡ ಸಾಧು. ಕೆಲ ಮಹಿಳೆಯರು ಸಾಧು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇದ್ರಿಂದ ಮನನೊಂದು ಸಾಧು ಬ್ಲೇಡ್ ನಿಂದ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾರೆ.

ಮಹಿಳೆಯ ಕಾಮದ ತೀಟೆಗೆ ವ್ಯಕ್ತಿ ಸಾವು..!

ಮದನಿ ಬಾಬಾರನ್ನ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯ ಸಾಧು ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಈ ಘಟನೆಗೆ ಸಂಬಂಧಿಸಿದಂತೆ ಸಾಧು ಮದನಿ ಬಾಬಾರಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.