ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರನ್ನು 'ಬೀದಿ ಗೂಂಡಾ' ಎಂದು ಕರೆದು ವಿವಾದವನ್ನು ಸೃಷ್ಟಿ ಮಾಡಿದ ಕಾಂಗ್ರೆಸ್ ಸಂಸದ ಸಂದೀಪ್ ದೀಕ್ಷಿತ್’ರಿಂದ ಪಕ್ಷ ಅಂತರ ಕಾಯ್ದುಕೊಂಡಿದೆ. ಯಾವೊಬ್ಬ ರಾಜಕಾರಣಿಯೂ ಸೇನಾ ಮುಖ್ಯಸ್ಥರನ್ನು ಟೀಕೆ ಮಾಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ (ಜೂ.12): ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರನ್ನು 'ಬೀದಿ ಗೂಂಡಾ' ಎಂದು ಕರೆದು ವಿವಾದವನ್ನು ಸೃಷ್ಟಿ ಮಾಡಿದ ಕಾಂಗ್ರೆಸ್ ಸಂಸದ ಸಂದೀಪ್ ದೀಕ್ಷಿತ್’ರಿಂದ ಪಕ್ಷ ಅಂತರ ಕಾಯ್ದುಕೊಂಡಿದೆ. ಯಾವೊಬ್ಬ ರಾಜಕಾರಣಿಯೂ ಸೇನಾ ಮುಖ್ಯಸ್ಥರನ್ನು ಟೀಕೆ ಮಾಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಕಾಶ್ಮೀರ ಸಮಸ್ಯೆ ಬಗ್ಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ಜ. ರಾವತ್‌, ಪ್ರತಿಭಟನಕಾರರು ತಮ್ಮತ್ತ ಕಲ್ಲೆಸೆಯುವುದಕ್ಕೆ ಬದಲು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರೆ ತಮ್ಮ ಕಾರ್ಯ ಸುಲಭವಾಗುತಿತ್ತು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸಂದೀಪ್ ದೀಕ್ಷಿತ್ ರಾವತ್ ರನ್ನು ಬೀದಿ ಗೂಂಡಾ ಎಂದು ಕರೆದಿದ್ದಾರೆ. ಇದು ಭಾರೀ ವಿಚಾದಕ್ಕೆ ಕಾರಣವಾಗಿದ್ದು, ಅವರ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು ಹಿಡಿದಿದೆ. ವಿವಾದದ ಕಿಡಿ ಹೆಚ್ಚಾದಾಗ ಸಂದೀಪ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಸೇನಾ ಮುಖ್ಯಸ್ಥರ ಬಗ್ಗೆ ಮಾತನಾಡುವಾಗ ವಿವಾದಗಳಿಂದ ದೂರವಿರುವಂತೆ ನಾವು ಸಲಹೆ ನೀಡಿದ್ದೆವು. ಅಂತಹ ಹೇಳಿಕೆಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.