ಇನ್ನು ಟಿಜಿಎಸ್ ಮತ್ತು ಡ್ರೀಮ್ಸ್  ಕಂಪನಿ ಹೆಸರಿನಲ್ಲಿ ವಂಚಿಸಿದ್ದ ಸಚಿನ್ ನಾಯ್ಕ್  ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ನೂರಾರು ಮಂದಿ ಮೌರ್ಯ ವೃತ್ತದಲ್ಲಿ  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ

ಸಚಿನ್ ನಾಯ್ಕ್​ಗೆ ಲಕ್ಷ ಲಕ್ಷ ಹಣ ಕೊಟ್ಟು ವಂಚನೆಗೊಳಗಾದವರು ಹಣ ಕೇಳಲು ಹೋದರೆ ಟಿಜಿಎಸ್ ಸಿಬ್ಬಂದಿಯೊಬ್ಬ ದುಂಡಾವರ್ತನೆ ತೋರಿದ್ದಾನೆ. ಬೆಂಗಳೂರಿನಲ್ಲಿರುವ ಟಿಜಿಎಸ್ ಕಂಪನಿ ಸಿಬ್ಬಂದಿ ಅಂಜನ್ ಕುಮಾರ್ ಎಂಬಾತ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ. ಹಣಕ್ಕೆ ಒತ್ತಾಯ ಮಾಡಿದರೆ ಹುಷಾರ್​ ಅಂತ ಲಾಂಗು ತೋರಿಸಿದ್ದಾನೆ. ಈ ಬಗ್ಗೆ ಮಡಿವಾಳ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಅಂತ ವಂಚನೆಗೊಳಗಾದವರು ದೂರಿದ್ದಾರೆ.

ಇನ್ನು ಟಿಜಿಎಸ್ ಮತ್ತು ಡ್ರೀಮ್ಸ್ ಕಂಪನಿ ಹೆಸರಿನಲ್ಲಿ ವಂಚಿಸಿದ್ದ ಸಚಿನ್ ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ನೂರಾರು ಮಂದಿ ಮೌರ್ಯ ವೃತ್ತದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಣ ವಾಪಸ್ ನೀಡುವುದರ ಜೊತೆಗೆ ಸಾವಿರಾರು ಜನರಿಂದ ಹಣ ಪಡೆದು ವಂಚನೆ ನಡೆಸಿರುವ ಸಚಿನ್​ ನಾಯ್ಕ್​ ಮತ್ತು ಆತನ ಪತ್ನಿಯರಾದ ಮಂದೀಪ್​ ಕೌರ್​ , ಇಶಾ ಚೌದರಿ ಮೂವರನ್ನು ಬಂಧಿಸಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗದಿದ್ದರೆ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಎಚ್ಚರಿಸಿದ್ದಾರೆ.

ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ನಾಳೆ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿ ನಂತರ ಗೃಹ ಸಚಿವರ ಮನೆಗೆ ದೊರೆಸ್ವಾಮಿ ನೇತೃತ್ವದಲ್ಲಿ ರಾಲಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.