ಶಬರಿಮಲೆ ದೇವಾಲಯವನ್ನು ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು  ಧಾರ್ಮಿಕ ಕಾರಣಗಳಿಗಾಗಿ ಹಾಗೂ ಇತ್ತೀಚಿನ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್‌ 15ರವರೆಗೆ ಬಂದ್‌ ಮಾಡಲಾಗಿದೆ. ಇದಾದ ನಂತರ ಇಲ್ಲಿ ಮಹಿಳೆಯರು ಪ್ರವೇಶ ಮಾಡುತ್ತಾರೋ ಇಲ್ಲವೋ ಎನ್ನುವುದನ್ನು ನೋಡಬೇಕಿದೆ.  

ಶಬರಿಮಲೆ: ಶಬರಿಮಲೆ ದೇವಾಲಯವನ್ನು ಧಾರ್ಮಿಕ ಕಾರಣಗಳಿಗಾಗಿ ಹಾಗೂ ಇತ್ತೀಚಿನ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್‌ 15ರವರೆಗೆ ಬಂದ್‌ ಮಾಡಲಾಗಿದೆ. 

ಹೀಗಾಗಿ ಸದ್ಯದ ಮಟ್ಟಿಗೆ ಅಲ್ಲಿಗೆ 10ರಿಂದ 50 ವರ್ಷದ ಮಹಿಳೆಯರು ಪ್ರವೇಶ ಮಾಡಲಾಗದು. ದೇವಾಲಯದ ಬಾಗಿಲು ತೆರೆಯುವ ಅಕ್ಟೋಬರ್‌ 16ರಿಂದ ಇದು ನೆರವೇರುವುದೇ ಕಾಯ್ದು ನೋಡಬೇಕು. 

ಆದರೆ, ಅ.16ರೊಳಗೆ ಸುಪ್ರೀಂ ಕೋರ್ಟ್‌ನ ಸಪ್ತ ಸದಸ್ಯ ಪೀಠವು ಈ ತೀರ್ಪಿನ ಮರುಪರಿಶೀಲನೆ ಮಾಡಬೇಕು ಎಂದು ಕೆಲವು ಧಾರ್ಮಿಕ ಸಂಘಟನೆಗಳು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.