ನ.16ರ ಸಂಜೆ 5 ಗಂಟೆಯಿಂದ ವಾರ್ಷಿಕ ಯಾತ್ರೆಗಾಗಿ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಿದೆ. ಈ ಅವಧಿಯಲ್ಲಿ ದೇವರ ದರ್ಶನ ಪಡೆಯಲು 10-50ರ ವಯೋಮಾನದ 550ಕ್ಕೂ ಹೆಚ್ಚು ಮಹಿಳೆಯರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ(ನ.13): ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ತನ್ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇಂದು ನಡೆಸಲಿದೆ. 

ನ.16ರ ಸಂಜೆ 5 ಗಂಟೆಯಿಂದ ವಾರ್ಷಿಕ ಯಾತ್ರೆಗಾಗಿ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಿದೆ. ಈ ಅವಧಿಯಲ್ಲಿ ದೇವರ ದರ್ಶನ ಪಡೆಯಲು 10-50ರ ವಯೋಮಾನದ 550ಕ್ಕೂ ಹೆಚ್ಚು ಮಹಿಳೆಯರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮೇಲ್ಮನವಿ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಸುಪ್ರೀಂಕೋರ್ಟ್‌ನ ಆದೇಶವನ್ನು, ಕೇರಳದ ಶಬರಿಮಲೆ ದೇಗುಲ ನಿರ್ವಹಿಸುವ ತಿರುವಾಂಕೂರು ದೇಗುಲ ಮಂಡಳಿಯಾಗಲೀಕ, ಕೇರಳ ಸರ್ಕಾರವಾಗಲೀ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿಲ್ಲ. ಆದರೆ ಇತರೆ ಹಲವು ಹಿಂದೂ ಪರ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತ ಸಂಘಟನೆಗಳು 15ಕ್ಕೂ ಹೆಚ್ಚು ಮೇಲ್ಮನವಿ ಅರ್ಜಿ ಸಲ್ಲಿಸಿವೆ. ಈ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಇಂದು ಒಟ್ಟಿಗೆ ವಿಚಾರಣೆ ನಡೆಸಲಿದೆ.

ಒಂದು ವೇಳೆ ತನ್ನ ಆದೇಶಕ್ಕೆ ಸುಪ್ರೀಂಕೋಟ್‌ ತಡೆ ನೀಡಿದ್ದೇ, ಆದಲ್ಲಿ ವಾರ್ಷಿಕ ಯಾತ್ರೆ ವೇಳೆ ದೇವರ ದರ್ಶನ ಪಡೆಯಲು ನಿರ್ಧರಿಸಿದ್ದ ಮಹಿಳಾ ಭಕ್ತರಿಗೆ ನಿರಾಸೆಯಾಗಲಿದೆ. ಒಂದು ವೇಳೆ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದ್ದೇ, ಆದಲ್ಲಿ ವಾರ್ಷಿಕ ಯಾತ್ರೆ ವೇಳೆ ಭಕ್ತರು ಮತ್ತು ಮಹಿಳೆಯರ ನಡುವೆ ದೊಡ್ಡ ಸಂಘರ್ಷ ನೆಯುವ ಸಾಧ್ಯತೆ ಇದೆ.