ನವದೆಹಲಿ: ಎರಡು ಹೈಕೋರ್ಟ್‌ಗಳ ಐವರು ನ್ಯಾಯಮೂರ್ತಿಗಳ ನೇಮಕ ಹಾಗೂ ಎರಡು ಹೈಕೋರ್ಟ್‌ಗಳ ಮೂವರು ನ್ಯಾಯಮೂರ್ತಿಗಳ ವರ್ಗಾವಣೆ ಆದೇಶ ಹೊರಬಿದ್ದಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಅಗರ್ವಾಲ್‌, ರಾಜೇಂದ್ರ ಚಂದ್ರ ಸಿಂಗ್‌ ಸಮಂತ್‌, ಅನಿಲ್‌ ಕುಮಾರ್‌ ಶುಕ್ಲಾ ಅವರು ಛತ್ತೀಸ್‌ಗಡ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಹಾಗೂ ಶಿವಾನಂದ ಪಾಠಕ್‌, ರಾಜೇಶ್‌ ಶಂಕರ್‌ ಜಾರ್ಖಂಡ್‌ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ. ನ್ಯಾ. ಸೊಂಗ್‌ ಖುಷ್ವಂಗ್‌ ಸೆರ್ಟೊ ಗುವಾಹಟಿ ಹೈಕೋರ್ಟ್‌ಗೆ, ಜೈಶ್ರೀ ಠಾಕೂರ್‌, ಅನೂಪಿಂದರ್‌ ಸಿಂಗ್‌ ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದಾರೆ.

ಈ ಸಂಬಂಧ ಕಾನೂನು ಸಚಿವಾಲಯ ಸುತ್ತೋಲೆ ಹೊರಡಿಸಿದೆ.