ಈಗಾಗಲೇ ಹಲವು ಸಂದರ್ಭಗಳಲ್ಲಿ ತಮ್ಮ ದೇಹದಾರ್ಢ್ಯವನ್ನು ಪ್ರದರ್ಶಿಸಿದ ರಷ್ಯಾ ಅಧ್ಯಕ್ಷ ಪುಟಿನ್ ಮತ್ತೆ 2019ರ ಕ್ಯಾಲೆಂಡರ್‌ಗೆ ಅರೆ ಬೆತ್ತಲೆ ಫೋಸ್ ನೀಡಿದ್ದಾರೆ!
ಒಂದು ದೇಶದ ಅಧ್ಯಕ್ಷರು ಎಂದರೆ ಅವರು ಬಹಿರಂಗವಾಗಿ ಕಾಣಿಸಿಕೊಳ್ಳುವಾಗ ಅತ್ಯಂತ ಶಿಸ್ತುಬದ್ಧವಾಗಿ ಉಡುಪು ಧರಿಸುವುದು ಸಾಮಾನ್ಯ. ಆದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗಲ್ಲ. ತಮ್ಮ ‘ಸಿಕ್ಸ್ ಪ್ಯಾಕ್’ ದೇಹಸಿರಿಯನ್ನು ಅನೇಕ ಬಾರಿ ಅವರು ಪ್ರದರ್ಶಿಸಿದ್ದುಂಟು.
ಅನೇಕ ಬಾರಿ ಅವರು ಸಮುದ್ರದಲ್ಲಿ ಸ್ನಾನ ಮಾಡುವಾಗ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ತಮ್ಮ ಅಂಗಸೌಷ್ಠವ ಪ್ರದರ್ಶಿಸಿದವರು.
ಇಂಥ ಪುಟಿನ್ ಈಗ 2019ರ ಕ್ಯಾಲೆಂಡರ್‌ಗೆ ಅರೆಬೆತ್ತಲೆಯಾಗಿ ಪೋಸ್ ನೀಡಿದ್ದಾರೆ. ಅವರು ನೀರಿನಿಂದ ಮಿಂದೇಳತ್ತ ಸ್ವಿಮ್ಮಿಂಗ್‌ಪೂಲ್‌ನಿಂದ ಹೊರಬರುತ್ತಿರುವ ಫೋಟೋಗಳು ಈಗ ವೈರಲ್ ಆಗಿವೆ.
