ಮಾಸ್ಕೋ :  ವಿವಿಧ ಸಂಸ್ಥೆಗಳು ಕರ್ತವ್ಯ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

 ರಷ್ಯಾದ ಕಂಪನಿಯೊಂದು, ಸ್ಕರ್ಟ್ ಧರಿಸಿ, ಚೆನ್ನಾಗಿ ಮೇಕಪ್ ಮಾಡಿಕೊಂಡು ಕಚೇರಿಗೆ ಬರುವ ಮಹಿಳಾ ಸಿಬ್ಬಂದಿಗೆ ನಿತ್ಯ ಅಂದಾಜು 100 ರು. ಬೋನಸ್ ನೀಡುವ ಆಫರ್ ನೀಡುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದೆ. 

ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‌ಪ್ರೋಫ್ ಎಂಬ ಕಂಪನಿ, ಕರ್ತವ್ಯದ ಸ್ಥಳವನ್ನು ಆಕರ್ಷಣೀಯಗೊಳಿಸಲು ಈ ಕ್ರಮ ಎಂದು ಹೇಳಿಕೊಂಡಿದೆ. ಆದರೆ ಕಂಪನಿಯ ಆಫರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.