Asianet Suvarna News Asianet Suvarna News

ಸಚಿವರ ರಾಸಲೀಲೆ ಪ್ರಕರಣ: ದೂರು ನೀಡಲು ತೆರಳಿದ ಆರ್'ಟಿಐ ಕಾರ್ಯಕರ್ತ

ಮೂಲತಃ ಬಳ್ಳಾರಿಯವರಾಗಿರುವ RTI ಕಾರ್ಯಕರ್ತ ರಾಜ್'ಶೇಖರ್ ಎಂಬವರ ಬಳಿ ಸಚಿವರ ರಾಸಲೀಲೆಯ ಸಿಡಿ ಇದೆ ಎಂದು ತಿಳಿದು ಬಂದಿದ್ದು, ಈ ಸಿಡಿ ಬಿಡುಗಡೆಗೊಳಿಸದಿರುವಂತೆ ಅಬಕಾರಿ ಸಚಿವ ಎಚ್ ವೈ ಮೇಟಿ ಬೆಂಬಲಿಗರು ಧಮ್ಕಿ ಹಾಕಿದ್ದಾರೆ.

RTI Activist goes to Police Station

ಬೆಂಗಳೂರು(ಡಿ.11): ಅಬಕಾರಿ ಸಚಿವ ಹೆಚ್.ವೈ. ಮೇಟಿ ವಿರುದ್ಧದ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಬೆಂಬಲಿಗರು ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ  ಆರ್'ಟಿಐ ಕಾರ್ಯಕರ್ತ ರಾಜಶೇಖರ್  ಪೊಲೀಸರಿಗೆ ದೂರು ನೀಡಲು ತೆರಳಿದ್ದಾರೆ. ರಾಸಲೀಲೆ ವಿಡಿಯೋ ತಮ್ಮ ಬಳಿ ಇದೆ ಎಂದದ್ದಕ್ಕೆ ಸಚಿವರ ಬೆಂಬಲಿಗರು ದೂರವಾಣಿ ಮೂಲಕ ಬೆದರಿಸಿದ್ದರು.

ಮೂಲತಃ ಬಳ್ಳಾರಿಯವರಾಗಿರುವ RTI ಕಾರ್ಯಕರ್ತ ರಾಜ್'ಶೇಖರ್ ಎಂಬವರ ಬಳಿ ಸಚಿವರ ರಾಸಲೀಲೆಯ ಸಿಡಿ ಇದೆ ಎಂದು ತಿಳಿದು ಬಂದಿದ್ದು, ಈ ಸಿಡಿ ಬಿಡುಗಡೆಗೊಳಿಸದಿರುವಂತೆ ಅಬಕಾರಿ ಸಚಿವ ಎಚ್ ವೈ ಮೇಟಿ ಬೆಂಬಲಿಗರು ಧಮ್ಕಿ ಹಾಕಿದ್ದಾರೆ.

ಸದ್ಯ ತಿಳಿದು ಬಂದಿರುವ ಮಾಹಿತಿಯನ್ವಯ ಈ ಕಾಮಕಾಂಡ ಶಕ್ತಿಶೌಧದಲ್ಲೇ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ. ತನ್ನ ವರ್ಗಾವಣೆಯ ಕುರಿತಾಗಿ ಸಚಿವ ಮೇಟಿ ಬಳಿ ಆ ಮಹಿಳೆ ಮಾತನಾಡಲು ಬಂದಿದ್ದು, ಈ ವೇಳೆ  ಸಚಿವರ ಅಧಿಕಾರದ ದಾಹಕ್ಕೆ ಮಹಿಳೆ ಬಲಿಯಾಗಿದ್ದಾಳೆ. ಸಚಿವರ ಈ ಕುಕೃತ್ಯದ ವಿಡಿಯೋ ಅವರ ಗನ್'ಮ್ಯಾನ್ ಕೈ ತಲುಪಿತ್ತು. ಇದನ್ನೇ ಇಟ್ಟುಕೊಂಡು ಆತ ಸಚ್ವರಿಗೆ ಬೆದರಿಕೆ ಒಡ್ಡಲಾರಂಭಿಸಿದ್ದ. ಬಳಿಕ ಈ ವಿಡಿಯೋ RTI ಕಾರ್ಯಕರ್ತನ ಕೈ ತಲುಪಿದೆ ಎನ್ನಲಾಗಿದೆ.

Follow Us:
Download App:
  • android
  • ios