ಎರಡು ಫ್ಲೋರ್ ಮೇಲ್ಪಟ್ಟು  ಇರುವ ಅಪಾರ್ಟ್​ಮೆಂಟ್​'ಗಳಲ್ಲಿ ತ್ಯಾಜ ನೀರು ಸಂಸ್ಕರಣಾ ಘಟಕ ಅಳವಡಿಕೆಯನ್ನ ಅಳವಡಿಸಿಕೊಳ್ಳುವುದನ್ನ ಕಡ್ಡಾಯಗೊಳಿಸಿದೆ. ಇದಕ್ಕೆ ಅಪಾರ್ಟ್'ಮೆಂಟ್ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಡಿ.02): ಎಸ್'​​​ಟಿಪಿ ಕಾಯ್ದೆ ವಿರೋಧಿಸಿ ಬೆಂಗಳೂರಿನ RT ನಗರ ಅಪಾರ್ಟ್'ಮೆಂಟ್ ನಿವಾಸಿಗಳ ಪ್ರತಿಭಟನೆ ನಡೆಸಿದ್ದಾರೆ.

ಎರಡು ಫ್ಲೋರ್ ಮೇಲ್ಪಟ್ಟು ಇರುವ ಅಪಾರ್ಟ್​ಮೆಂಟ್​'ಗಳಲ್ಲಿ ತ್ಯಾಜ ನೀರು ಸಂಸ್ಕರಣಾ ಘಟಕ ಅಳವಡಿಕೆಯನ್ನ ಅಳವಡಿಸಿಕೊಳ್ಳುವುದನ್ನ ಕಡ್ಡಾಯಗೊಳಿಸಿದೆ. ಇದಕ್ಕೆ ಅಪಾರ್ಟ್'ಮೆಂಟ್ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹಳೆ ಅಪಾರ್ಟ್'​ಮೆಂಟ್​'ಗಳಲ್ಲಿ ಜಾಗದ ಕೊರತೆಯಿದೆ. ಹೀಗಾಗಿ ಎಸ್'ಟಿಪಿ ಅಳವಡಿಸಲು ಸಾಧ್ಯವಿಲ್ಲ ಎಂದು ನಿವಾಸಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಈಗಾಗಲೇ ಎಸ್'ಟಿಪಿ ಕಡ್ಡಾಯಗೊಳಿಸಿ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಯಾರು ಎಸ್'ಟಿಪಿ ಅಳವಡಿಸಿಕೊಂಡಿಲ್ಲವೋ ಅಂತವರ ವಿರುದ್ಧ ಜಲಮಂಡಳಿ ಅಪಾರ್ಟ್'ಮೆಂಟ್'​ಗಳಿಗೆ ದಂಡ ಕೂಡ ಹಾಕುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.