ಬೆಂಗಳೂರು(ಅ.27): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು, ಪ್ರತಿಕ್ರಿಯಿಸಿರುವ ರುದ್ರೇಶ್ ಪತ್ನಿ ವಿದ್ಯಾವತಿ, ನನಗೆ ಸದ್ಯ ನ್ಯಾಯ ಸಿಕ್ಕಿದೆ ಅನ್ನಿಸುತ್ತಿದೆ. ಇನ್ಮುಂದೆ ಬೆಂಗಳೂರಲ್ಲಾಗಲಿ, ದೇಶದಲ್ಲಾಗಲಿ ಈ ರೀತಿಯ ಯಾವುದೇ ಘಟನೆ ನಡೆಯಬಾರದು. ಇಂತಹ ಪರಿಸ್ಥಿತಿ ಮತ್ಯಾರಿಗೂ ಬರಬಾರದು. ಪೊಲೀಸರು ಮತ್ತಷ್ಟು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

CLICK HERE.. ರುದ್ರೇಶ್ ಹತ್ಯೆಗೈದವರು ಯಾವ ಸಂಘಟನೆಗೆ ಸೇರಿದವರು ಗೊತ್ತಾ..?

ಪ್ರಕರಣವನ್ನ ದಾರಿ ತಪ್ಪಿಸುವ ಪ್ರಯತ್ನ ನಡೆದಿತ್ತು. ಆದರೆ, ಪೊಲೀಸರು ಅವರು ಯಾರೇ ಇದ್ದರೂ ಬಂಧಿಸುತ್ತೇವೆಂಬ ಭರವಸೆ ನಿಡಿದ್ದರು. ಈಗ ಻ವರ ಕೆಲಸವನ್ನ ಮಾಡಿದ್ದಾರೆ ಎಂದು ಪದ್ಮಾವತಿ ಹೇಳಿದ್ದಾರೆ.