ಮೋಹನ್ ಭಾಗವತ್ ಹೇಳಿಕೆಯನ್ನು ಮುಂಬರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯುವ ತಂತ್ರವೆಂದು ಬಣ್ಣಿಸಿರುವ ಜೆಡಿಯು ನಾಯಕ ಪವನ್ ವರ್ಮಾ, ಆರೆಸ್ಸೆಸ್’ಗೆ ಹಿಂದೂ ಸಮುದಾಯದ ವಕ್ತಾರನಂತೆ ಮಾತನಾಡುವ ಅಧಿಕಾರವಿಲ್ಲವೆಂದು ಹೇಳಿದ್ದಾರೆ.

ನವದೆಹಲಿ (ಜ.15): ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಖಂಡಿಸಿರುವ ಸಂಯುಕ್ತ ಜನತಾ ದಳ, ಹಿಂದೂ ಸಮುದಾಯದ ವಕ್ತಾರರಂತೆ ವರ್ತಿಸಬೇಡಿ ಎಂದು ತಿರಗೇಟು ನೀಡಿದೆ.

ಮೋಹನ್ ಭಾಗವತ್ ಹೇಳಿಕೆಯನ್ನು ಮುಂಬರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯುವ ತಂತ್ರವೆಂದು ಬಣ್ಣಿಸಿರುವ ಜೆಡಿಯು ನಾಯಕ ಪವನ್ ವರ್ಮಾ, ಆರೆಸ್ಸೆಸ್’ಗೆ ಹಿಂದೂ ಸಮುದಾಯದ ವಕ್ತಾರನಂತೆ ಮಾತನಾಡುವ ಅಧಿಕಾರವಿಲ್ಲವೆಂದು ಹೇಳಿದ್ದಾರೆ.

ಎಲ್ಲಾ ಹಿಂದೂಗಳ ಪರವಾಗಿ ತಾನು ಮಾತನಾಡಬಹುದೆಂದು ಆರೆಸ್ಸೆಸ್ ಭಾವಿಸಿದಂತಿದೆ. ತನ್ನ ಬಗ್ಗೆ ಕಾಳಜಿ ವಹಿಸಲು ಹಿಂದೂ ಸಮುದಾಯವು ಸಮರ್ಥವಾಗಿದೆ, ಎಂದು ವರ್ಮಾ ಹೇಳಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಏಕಾಏಕಿ ಆ ರೀತಿಯ ಹೇಳಿಕೆಗಳನ್ನು ನೀಡಿ ಸಮಾಜವನ್ನು ಒಡೆಯುವ ಮೋಹನ್ ಭಾಗವತ್’ರ ಪ್ರಯತ್ನವು ಖಂಡನೀಯವೆಂದು ಜೆಡಿಯು ನಾಯಕ ಹೇಳಿದ್ದಾರೆ.

ನಿನ್ನೆ ಕೋಲ್ಕತ್ತಾದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್, ಭಾರತದ ಕೆಲವು ಕಡೆ ಹಿಂದೂಗಳು ಸ್ವತಂತ್ರವಾಗಿ ಜೀವಿಸುವ ಪರಿಸ್ಥಿತಿ ಇಲ್ಲ, ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.