ಬಿಜೆಪಿ ಮುಖಂಡ ವಿನಯ್‌ ಸಹಸ್ರಬುದ್ಧೆ ಅವರು ಉಪಾಧ್ಯಕ್ಷರಾಗಿರುವ ರಾಮ ಭಾವು ಮ್ಹಾಲ್ಗಿ ಪ್ರಬೋಧಿನಿ (ಆರ್‌ಎಂಪಿ) ಎಂಬ ಸಂಘಟನೆಯೇ ರಾಜಕೀಯ ಮುಖಂಡರಾಗಲು ಬಯಸುವವರಿಗೆ 9 ತಿಂಗಳ ಕೋರ್ಸು ಆರಂಭಿ ಸಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉತ್ತನ್‌ ಎಂಬಲ್ಲಿ ಸಂಘಟನೆ ಜಾಗ ಹೊಂದಿದ್ದು, ಅಲ್ಲಿ ಈ ಕೋರ್ಸನ್ನು ಆಗಸ್ಟ್‌ 1ರಿಂದ ಆರಂಭಿಸಲಾ ಗುತ್ತದೆ. ಆಕಾಂಕ್ಷಿಗಳು ಕಡ್ಡಾಯವಾಗಿ ಡಿಗ್ರಿ ಪಾಸಾಗಿರಬೇಕು.

ನವದೆಹಲಿ(ಜೂ.26): ಇಂದು ಅನೇಕರು ರಾಜಕೀಯ ಸೇರಲು ಬಯಸುತ್ತಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ಇರುವುದಿಲ್ಲ, ನೀತಿ ನಿರೂ ಪಣೆಗಳ ಬಗ್ಗೆ, ಆಡಳಿತದ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಇಂಥ ಕೊರತೆ ನೀಗಿ ಆಕಾಂಕ್ಷಿಗಳು ಉತ್ತಮ ರಾಜಕಾರಣಿ ಯಾಗಬೇಕು ಎಂಬ ನಿಟ್ಟಿನಲ್ಲಿ ಆರೆಸ್ಸೆಸ್‌ನ ಸಹವರ್ತಿ ಸಂಸ್ಥೆ ಯೊಂದು ‘ರಾಜಕೀಯ ಆಕಾಂಕ್ಷಿ' ಗಳಿಗೆ ಹೊಸ ಕೋರ್ಸ್‌ ಆರಂಭಿಸಿದೆ.
ಬಿಜೆಪಿ ಮುಖಂಡ ವಿನಯ್‌ ಸಹಸ್ರಬುದ್ಧೆ ಅವರು ಉಪಾಧ್ಯಕ್ಷರಾಗಿರುವ ರಾಮ ಭಾವು ಮ್ಹಾಲ್ಗಿ ಪ್ರಬೋಧಿನಿ (ಆರ್‌ಎಂಪಿ) ಎಂಬ ಸಂಘಟನೆಯೇ ರಾಜಕೀಯ ಮುಖಂಡರಾಗಲು ಬಯಸುವವರಿಗೆ 9 ತಿಂಗಳ ಕೋರ್ಸು ಆರಂಭಿ ಸಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉತ್ತನ್‌ ಎಂಬಲ್ಲಿ ಸಂಘಟನೆ ಜಾಗ ಹೊಂದಿದ್ದು, ಅಲ್ಲಿ ಈ ಕೋರ್ಸನ್ನು ಆಗಸ್ಟ್‌ 1ರಿಂದ ಆರಂಭಿಸಲಾ ಗುತ್ತದೆ. ಆಕಾಂಕ್ಷಿಗಳು ಕಡ್ಡಾಯವಾಗಿ ಡಿಗ್ರಿ ಪಾಸಾಗಿರಬೇಕು. 40 ವಿದ್ಯಾರ್ಥಿಗಳು ಪ್ರತಿ ಬ್ಯಾಚ್‌ನಲ್ಲಿ ಇರುತ್ತಾರೆ. 9 ತಿಂಗಳ ಕೋರ್ಸ್‌ಗೆ 2.5 ಲಕ್ಷ ರು. ಶುಲ್ಕ ಪಡೆಯಲಾಗುತ್ತದೆ. ಇದರಲ್ಲಿ ಊಟೋಪಚಾರ, ಹಾಸ್ಟೆಲ್‌, ಅಧ್ಯಯನ ಪ್ರವಾಸ, ಶೈಕ್ಷಣಿಕ ಖರ್ಚುಗಳೂ ಸೇರಿರುತ್ತವೆ. ಆಕಾಂಕ್ಷಿಗಳು ಜೂನ್‌ 30ರೊಳಗೆ ಅರ್ಜಿ ಸಲ್ಲಿಸಬೇಕಿದೆ.
ಈ ಬಗ್ಗೆ ಮಾತನಾಡಿದ ಸಹಸ್ರಬುದ್ಧೆ ಅವರು, ದೇಶದ ಜನತೆಯ ಹಿತದೃಷ್ಟಿಯಿಂದ ಪ್ರಯೋಜನಕಾರಿ ಕೋರ್ಸ್‌ ಇದಾಗಿದೆ. ಕೋರ್ಸ್‌ ಮುಗಿದ ಬಳಿಕ ವಿದ್ಯಾರ್ಥಿಗಳು ಯಾವುದಾದರೂ ಪಕ್ಷ ಸೇರಬಹುದು. ಈ ವಿಷಯದಲ್ಲಿ ಅವರು ಸ್ವತಂತ್ರರು ಎಂದು ಸ್ಪಷ್ಟಪಡಿಸಿದರು.