Asianet Suvarna News Asianet Suvarna News

ಸೇನೆಗಿಂತ ಆರ್‌ಎಸ್‌ಎಸ್ ಕ್ಷಮತೆ ಹೆಚ್ಚು : ಭಾಗವತ್‌ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ

ಅಗತ್ಯ ಬಿದ್ದರೆ, ದೇಶದ ರಕ್ಷಣೆಗಾಗಿ ಕೇವಲ ಮೂರೇ ದಿನಗಳಲ್ಲಿ ದಿನಗಳಲ್ಲಿ ಕಾರ್ಯಕರ್ತರನ್ನು ಸೇನೆಯಂತೆ ಸಜ್ಜುಗೊಳಿಸುವ ಸಾಮರ್ಥ್ಯ ಆರ್‌ಎಸ್‌ಎಸ್‌ಗೆ ಇದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಆದರೆ ಇಂಥ ಹೇಳಿಕೆ ವೇಳೆ ಆರ್‌ಎಸ್‌ಎಸ್‌ ಸಾಮರ್ಥ್ಯವನ್ನು ಸೇನೆಗೆ ಹೋಲಿಕೆ ಮಾಡಿದ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

RSS Is Very Strong Says Mohan Bhagwat

ಲಖನೌ: ಅಗತ್ಯ ಬಿದ್ದರೆ, ದೇಶದ ರಕ್ಷಣೆಗಾಗಿ ಕೇವಲ ಮೂರೇ ದಿನಗಳಲ್ಲಿ ದಿನಗಳಲ್ಲಿ ಕಾರ್ಯಕರ್ತರನ್ನು ಸೇನೆಯಂತೆ ಸಜ್ಜುಗೊಳಿಸುವ ಸಾಮರ್ಥ್ಯ ಆರ್‌ಎಸ್‌ಎಸ್‌ಗೆ ಇದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಆದರೆ ಇಂಥ ಹೇಳಿಕೆ ವೇಳೆ ಆರ್‌ಎಸ್‌ಎಸ್‌ ಸಾಮರ್ಥ್ಯವನ್ನು ಸೇನೆಗೆ ಹೋಲಿಕೆ ಮಾಡಿದ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಭಾನುವಾರ ಇಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌, ‘ಯಾವುದೇ ಕಾರ್ಯಾಚರಣೆಗೆ ಭಾರತೀಯ ಸೇನೆ 6-7 ತಿಂಗಳು ತೆಗೆದುಕೊಳ್ಳುತ್ತದೆ. ಆದರೆ, ಸಂಘ ಮೂರು ದಿನಗಳಲ್ಲಿ ಇಂಥ ಯೋಜನೆ ರೂಪಿಸುವ ಸಾಮರ್ಥ್ಯ ಹೊಂದಿದೆ. ಸಂವಿಧಾನ ಅವಕಾಶ ನೀಡಿದರೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಹ ಸ್ವಯಂ ಸೇವಕರು ಸಜ್ಜಾಗಿದ್ದಾರೆ,’ ಎಂದು ಹೇಳಿದ್ದಾರೆ.

ಸಂಘವು ಮಿಲಿಟರಿ ಅಥವಾ ಪ್ಯಾರಾ ಮಿಲಿಟರಿ ಅಲ್ಲ. ಆದರೆ, ಇದೊಂದು ಕೌಟುಂಬಿಕ ಸಂಘಟನೆಯಾಗಿದ್ದು, ದೇಶಕ್ಕಾಗಿ ಪ್ರಾಣವನ್ನೇ ಅರ್ಪಣೆ ಮಾಡುವ ಸೇನೆಯಂತೆಯೇ ಶಿಸ್ತು ಪಾಲನೆ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.

ಆದರೆ ಆರ್‌ಎಸ್‌ಎಸ್‌ ಸಾಮರ್ಥ್ಯ ಸೇನೆಗಿಂತ ಮೇಲು ಎಂಬ ಭಾಗವತ್‌ ಅವರ ಹೇಳಿಕೆಗೆ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಇಂಥದ್ದೊಂದು ಹೇಳಿಕೆ ಮೂಲಕ ಅವರು ಸೇನೆಯನ್ನು ಅಪಮಾನ ಮಾಡಿದ್ದಾರೆ ಎಂಬ ಟೀಕೆ ಕೇಳಿಬಂದಿದೆ.

Follow Us:
Download App:
  • android
  • ios