500ರ ನೋಟುಗಳು ನಿತ್ಯ 3 ಸಾವಿರ ಕೋಟಿ ರೂ. ಮುದ್ರಣ

Rs 500 notes worth Rs 3000 crore printed every day
Highlights

ನಗದು ಬೇಡಿಕೆಗೆ ಯಾವುದೇ ರೀತಿಯ ತುರ್ತು ಎದುರಾಗದೆ ಸಾಕಷ್ಟು ನೋಟುಗಳು ಲಭ್ಯವಿದ್ದು ಬೇಡಿಕೆಯ ಆಧಾರದ ಮೇಲೆ ಮುದ್ರಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣದುಬ್ಬರದಲ್ಲಿನ ಅಸಮಾನತೆಯ ಏರಿಕೆ ಅಥವಾ ಮತ್ಯಾವುದೇ ತೊಂದರೆ ಸಂಭವಿಸಿಲ್ಲ.  ಕಳೆದ ವಾರ ಎಟಿಎಂನಲ್ಲಿ ನಗದು ಸಮಸ್ಯೆಗೆ ಉತ್ತರಿಸಿದ ಅವರು ಶೇ.85 ಪರಿಸ್ಥಿತಿ ಉತ್ತಮವಾಗಿತ್ತು. ಪ್ರಸ್ತುತ ಕೂಡ ಆರಾಮದಾಯಕವಾಗಿದೆ '

ಮುಂಬೈ(ಮೇ.06): ಹೆಚ್ಚುವರಿ ಬೇಡಿಕೆಯ ಹಿನ್ನಲೆಯಲ್ಲಿ ನಿತ್ಯ 500 ರೂ.ಮೌಲ್ಯದ ನೋಟುಗಳನ್ನು 3 ಸಾವಿರ ಕೋಟಿ ರೂ ಮುದ್ರಿಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಸುಭಾಶ್ ಚಂದ್ರ ಗಾರ್ಗ್ ತಿಳಿಸಿದ್ದಾರೆ.
ನಗದು ಬೇಡಿಕೆಗೆ ಯಾವುದೇ ರೀತಿಯ ತುರ್ತು ಎದುರಾಗದೆ ಸಾಕಷ್ಟು ನೋಟುಗಳು ಲಭ್ಯವಿದ್ದು ಬೇಡಿಕೆಯ ಆಧಾರದ ಮೇಲೆ ಮುದ್ರಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣದುಬ್ಬರದಲ್ಲಿನ ಅಸಮಾನತೆಯ ಏರಿಕೆ ಅಥವಾ ಮತ್ಯಾವುದೇ ತೊಂದರೆ ಸಂಭವಿಸಿಲ್ಲ.  ಕಳೆದ ವಾರ ಎಟಿಎಂನಲ್ಲಿ ನಗದು ಸಮಸ್ಯೆಗೆ ಉತ್ತರಿಸಿದ ಅವರು ಶೇ.85 ಪರಿಸ್ಥಿತಿ ಉತ್ತಮವಾಗಿತ್ತು. ಪ್ರಸ್ತುತ ಕೂಡ ಆರಾಮದಾಯಕವಾಗಿದೆ 'ಎಂದರು.
2 ಸಾವಿರ ಮೌಲ್ಯದ ನೋಟು 7 ಲಕ್ಷ ಕೋಟಿ ರೂ. ಪ್ರಸರಣೆಯಾಗುತ್ತಿದೆ.  ಈ ನೋಟುಗಳಿಗೆ ಅಗತ್ಯತೆ ಹೆಚ್ಚಿದ್ದರೂ  ಹೊಸ ನೋಟುಗಳನ್ನು ಮುದ್ರಿಸಲಾಗುತ್ತಿಲ್ಲ. ಜನಸಾಮಾನ್ಯರು 500, 200 ಹಾಗೂ 100 ರೂ.ಗಳ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ನಕಲಿ ನೋಟುಗಳ ಬಗ್ಗೆ ಆರ್'ಬಿಐ ಹೆಚ್ಚು ಜಾಗ್ರತೆ ವಹಿಸಿದ್ದು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕಳೆ ಎರಡೂವರೆ ವರ್ಷಗಳಲ್ಲಿ  ದೇಶದಲ್ಲಿ ನಕಲಿ ನೋಟುಗಳ ಹಾವಳಿ ಸಾಕಷ್ಟು ಕಡಿಮೆಯಾಗಿದೆ' ಎಂದು ತಿಳಿಸಿದರು.

loader