ನ್ಯಾಷನಲ್ ಹೆರಾಲ್ಡ್ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ: ಗಾಂಧಿ ಕುಟುಂಬದಲ್ಲಿ ನಡುಕ

Rs 414 crore fine imposed by IT department on firm in Herald case Swamy to court
Highlights

ಎಐಸಿಸಿ ಅಧ್ಯಕ್ಷರಾಗಿ ಭಾರಿ ಹುಮ್ಮಸ್ಸಿನಿಂದ ರಾಹುಲ್​ ಗಾಂಧಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಹೊಸ ಬಾಂಬ್​ ನಿಂದಾಗಿ ಗಾಂಧಿ ಕುಟುಂಬದಲ್ಲಿ ನಡುಕ ಶುರುವಾಗಿದೆ.  

ನವದೆಹಲಿ (ಜ.20): ಎಐಸಿಸಿ ಅಧ್ಯಕ್ಷರಾಗಿ ಭಾರಿ ಹುಮ್ಮಸ್ಸಿನಿಂದ ರಾಹುಲ್​ ಗಾಂಧಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಹೊಸ ಬಾಂಬ್​ ನಿಂದಾಗಿ ಗಾಂಧಿ ಕುಟುಂಬದಲ್ಲಿ ನಡುಕ ಶುರುವಾಗಿದೆ.  

ರಾಹುಲ್​ ಗಾಂಧಿ ಇತ್ತೀಚೆಗೆ ವಿವಿಧ ರಾಜ್ಯಗಳ ಟೆಂಪಲ್​ ರನ್​ ಮೂಲಕ ಅಧಿಕಾರ ಹಿಡಿಯಲು ಶ್ರಮಿಸುತ್ತಿದ್ದು, ಆದ್ರೆ ಸುಬ್ರಮಣಿಯನ್ ಸ್ವಾಮಿ ತೆರಿಗೆ ವಂಚನ ಆರೋಪದಿಂದ ದೇಶಾದ್ಯಂತ ಗಾಂಧಿ ಕುಟುಂಬಕ್ಕೆ ಮುಜುಗರ ಉಂಟಾಗಿದೆ.

ನ್ಯಾಷನಲ್ ಹೆರಾಲ್ಡ್​ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು.. ಸ್ವಾತಂತ್ರ ಸೇನಾನಿಗಳಿಂದಲೇ ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯನ್ನು ಸೋನಿಯಾ, ರಾಹುಲ್​ ಗಾಂಧಿ ಯಂಗ್ ಇಂಡಿಯಾ ಸಂಸ್ಥೆ ಮೂಲಕ ದೆಹಲಿ , ಉತ್ತರ ಪ್ರದೇಶದಲ್ಲಿದ್ದ  2000 ಕೋಟಿ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ದೆಹಲಿ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದರು.  ನಂತರ ವಿಚಾರಣೆಯಿಂದ ರಾಹುಲ್, ಸೋನಿಯಾ ಜಾಮೀನು ಪಡೆದು ನಿಟ್ಟುಸಿರು ಪಡೆದಿದ್ದರು.  ಆದರೆ ಈಗ ಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದು, ಕಾಂಗ್ರೆಸ್ಸಿಗರಲ್ಲಿ ನಡುಕ ಶುರುವಾಗಿದೆ.. ನ್ಯಾಷನಲ್​ ಹೆರಾಲ್ಡ್​  2000 ಕೋಟಿ ರೂಪಾಯಿ ಆಸ್ತಿಯಲ್ಲಿ ಗಾಂಧಿ ಕುಟುಂಬ ಭಾರಿ ಪ್ರಮಾಣದ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಕೋರ್ಟ್​ ಮೆಟ್ಟಿಲೇರಿದ್ದಾರೆ..

ಗಾಂಧಿ ಕುಟುಂಬದ ವಿರುದ್ಧ  ತೆರಿಗೆ ವಂಚನೆಯ 105 ಪುಟಗಳ ದಾಖಲೆಯನ್ನು ಮುಚ್ಚಿದ ಲಕೋಟೆಯಲ್ಲಿ ಸುಬ್ರಮಣಿಯನ್​ ಸ್ವಾಮಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆಯನ್ನು ಮಾರ್ಚ್​ 17ಕ್ಕೆ ನ್ಯಾಯಾಲಯ ಮುಂದೂಡಿದ್ದು, ಎಲ್ಲರಲ್ಲಿ ಕುತೂಹಲ ಹೆಚ್ಚಿಸಿದೆ.

 

loader