4 ವರ್ಷದಲ್ಲಿ ಮೋದಿ ವಿದೇಶ ಪ್ರವಾಸಕ್ಕೆ ಖರ್ಚಾದ ಹಣವೆಷ್ಟು?

Rs 355 cr spent on Modi’s 41 foreign trips since becoming PM, reveals RTI
Highlights

ಬೆಂಗಳೂರು ಮೂಲದ ಆರ್ ಟಿಐ ಕಾರ್ಯಕರ್ತನಿಂದ ಮೋದಿ ವಿದೇಶಿ ಪ್ರವಾಸದ ಹಣ ಬಹಿರಂಗವಾಗಿದೆ. ವಿದೇಶ ಪ್ರವಾಸಕ್ಕೆ ಮೋದಿಗೋಸ್ಕರ ಖರ್ಚಾಗಿರುವುದು ಬರೋಬ್ಬರಿ 355 ಕೋಟಿ ರೂ. !

ನವದೆಹಲಿ(ಜೂ.29) ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಗದ್ದುಗೆ ಏರಿ ನಾಲ್ಕು ವರ್ಷ ಕಳೆದಿದೆ. ನಾಲ್ಕು ವರ್ಷದಲ್ಲಿ ಮೋದಿ ಮಾಡಿದ ವಿದೇಶ ಪ್ರವಾಸಗಳಿಗೂ ಲೆಕ್ಕವಿಲ್ಲ. ಹಾಗಾದರೆ ಮೋದಿ ವಿದೇಶ ಪ್ರವಾಸಕ್ಕೋಸ್ಕರ ಖರ್ಚು ಮಾಡಿದ ಹಣವೆಷ್ಟು? ಉತ್ತರ ಕೇಳಿದರೆ ಒಂದು ಕ್ಷಣ ದಂಗಾಗುವುದು ಖಂಡಿತ. ಮೋದಿ ಪ್ರವಾಸಕ್ಕೆ ಇಲ್ಲಿಯವರೆಗೆ ಖರ್ಚಾಗಿರುವುದು 355 ಕೋಟಿ ರೂ.!

ಹೌದು ಮೋದಿ ತಮ್ಮ 48 ತಿಂಗಳ ಅಧಿಕಾರಾವಧಿಯಲ್ಲಿ ಮೋದಿ 41 ಸಾರಿ ವಿದೇಶ ಪ್ರವಾಸ ಮಾಡಿದ್ದಾರೆ. 52 ದೇಶಗಳಿಗೆ ಭೇಟಿ ನೀಡಿದ್ದು 165 ದಿನಗಳನ್ನುವಿದೇಶದಲ್ಲೇ ಕಳೆದಿದ್ದಾರೆ.

ಟ್ರಬಲ್‌ಶೂಟರ್ ಸಿದ್ದರಾಮಯ್ಯ ಟ್ರಬಲ್‌ಮೇಕರ್‌ ಆಗಿದ್ದು ಯಾಕೆ?

ಬೆಂಗಳೂರು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡದ್ ಎಂಬುವವರು ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ಹಕ್ಕು ಅನ್ವಯ ಸಲ್ಲಿಸಿದ ಅರ್ಜಿಗೆ ಈ ಮಾಹಿತಿ ಸಿಕ್ಕಿದೆ. ಫ್ರಾನ್ಸ್, ಜರ್ಮನಿ ಮತ್ತು ಕೆನಡಾಕ್ಕೆ ತೆರಳಿದ್ದ ಮೂರು ದೇಶಗಳ ಪ್ರವಾಸಕ್ಕೆ ಅತಿ ಹೆಚ್ಚಿನ ವೆಚ್ಚ ತಗುಲಿದೆ. ಈ ಪ್ರವಾಸಕ್ಕೊಂದೆ 31.25 ಕೋಟಿ ರೂ. ಖರ್ಚಾಗಿದೆ. ಭೂತಾನ್ ಪ್ರವಾಸಕ್ಕೆ 2.5 ಕೋಟಿ ರೂ. ಖರ್ಚಾಗಿದ್ದು ಇದು ಅತಿ ಮ ಕಡಿಮೆ ವೆಚ್ಚದ ಪ್ರವಾಸವಾಗಿದೆ.

 

loader