ಮಾರುಕಟ್ಟೆಯಲ್ಲಿ ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿ 200 ರೂ ನೋಟು ಬಿಡುಗಡೆ ಮಾಡಿರುವುದಾಗಿ ಆರ್'ಬಿಐ ಹೇಳಿದೆ. ಇದರೊಂದಿಗೆ ಈಗ 1, 2, 5, 10, 20, 50, 100 ಮತ್ತು 2000 ಮುಖಬೆಲೆಯ ನೋಟುಗಳ ಪಟ್ಟಿಗೆ ಈಗ 200 ರೂ ನೋಟು ಸೇರ್ಪಡೆಗೊಂಡಂತಾಗಿದೆ.
ನವದೆಹಲಿ(ಆ. 24): ಭಾರತದಲ್ಲಿ ಮೊತ್ತಮೊದಲ ಬಾರಿಗೆ 200 ರೂ ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ. ನಾಳೆಯಿಂದಲೇ 200 ರೂ ನೋಟುಗಳು ಎಲ್ಲಾ ಬ್ಯಾಂಕ್'ಗಳಲ್ಲಿ ಲಭ್ಯವಿರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದೆ.
ಹೊಳಪು ಹಳದಿ ಬಣ್ಣದ ಈ ನೋಟು 66 X 146 ಮೀಟರ್ ಅಳತೆಯಲ್ಲಿದೆ. ಹಿಂಬದಿಯಲ್ಲಿ ದೇಶದ ಸಂಸ್ಕೃತಿಯ ಪ್ರತೀಕವಾಗಿ ಸಾಂಚಿ ಸ್ಥೂಪಾದ ಚಿತ್ರವಿದೆ. ಸ್ವಚ್ಛ್ ಭಾರತ್'ನ ಲೋಗೋ, ವಿವಿಧ ಭಾಷೆಗಳಲ್ಲಿ ಸಂಖ್ಯೆ ತಿಳಿಸಿರುವ ಪಟ್ಟಿ, ದೇವನಾಗರಿ ಅಂಕಿ ಇವೆ. ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿಯ ಚಿತ್ರ, ಅಶೋಕ ಪಿಲ್ಲರ್ ಚಿಹ್ನೆ ಇವೆ.
ಮಾರುಕಟ್ಟೆಯಲ್ಲಿ ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿ 200 ರೂ ನೋಟು ಬಿಡುಗಡೆ ಮಾಡಿರುವುದಾಗಿ ಆರ್'ಬಿಐ ಹೇಳಿದೆ. ಇದರೊಂದಿಗೆ ಈಗ 1, 2, 5, 10, 20, 50, 100 ಮತ್ತು 2000 ಮುಖಬೆಲೆಯ ನೋಟುಗಳ ಪಟ್ಟಿಗೆ ಈಗ 200 ರೂ ನೋಟು ಸೇರ್ಪಡೆಗೊಂಡಂತಾಗಿದೆ.
ಇನ್ನು, ಸುವರ್ಣನ್ಯೂಸ್ ಜೊತೆ ಮಾತನಾಡಿದ ಹಣಕಾಸು ತಜ್ಞ ವಿಜಯ್ ರಾಜೇಶ್ ಅವರು, ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಪೂರ್ವಬಾವಿಯಾಗಿ ಸರಕಾರವು 200 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.