2 ಸಾವಿರ ರೂ.ಗೆ ಚಿಲ್ಲರೆ ಸಮಸ್ಯೆ ಉಂಟಾಗಿರುವುದರಿಂದ ಹೊಸ ವಿನ್ಯಾಸದೊಂದಿಗೆ 1 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಮುದ್ರಿಸಲು ಮುಂದಾಗಿದ್ದು, ಈಗಾಗಲೇ ಮುದ್ರಣ ಕಾರ್ಯ ಆರಂಭವಾಗಿದೆ.
ಮುಂಬೈ(ಫೆ.21): ನೂತನ 1000 ರೂ. ನೋಟು ಶೀಘ್ರದಲ್ಲಿಯೇ ಗ್ರಾಹಕರ ಕೈಗೆ ತಲುಪಲಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 8 ರಂದು ಭ್ರಷ್ಟಾಚಾರ ತಡೆಗಟ್ಟುವ ಸಲುವಾಗಿ 1 ಸಾವಿರ ಹಾಗೂ 500 ರೂ. ನೋಟುಗಳನ್ನು ರದ್ದುಗೊಳಿಸಿಬದಲಿಗೆ 2 ಸಾವಿರ ಹಾಗೂ 500 ರೂ. ನೋಟುಗಳನ್ನು ಪರಿಚಯಿಸಿತ್ತು. 2 ಸಾವಿರ ರೂ.ಗೆ ಚಿಲ್ಲರೆ ಸಮಸ್ಯೆ ಉಂಟಾಗಿರುವುದರಿಂದ ಹೊಸ ವಿನ್ಯಾಸದೊಂದಿಗೆ 1 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಮುದ್ರಿಸಲು ಮುಂದಾಗಿದ್ದು, ಈಗಾಗಲೇ ಮುದ್ರಣ ಕಾರ್ಯ ಆರಂಭವಾಗಿದೆ. ಇನ್ನು ಕೆಲವು ತಿಂಗಳಲ್ಲಿಯೇ ಹೊಸ ನೋಟು ಸಾರ್ವಜನಿಕರ ಕೈ ಸೇರಲಿದೆ. ಆದರೆ ಯಾವಾಗ ಎಂಬುದನ್ನು ಖಚಿತ ಪಡಿಸಿಲ್ಲ.
