ಇನ್ನು ನಿನ್ನೆ ತಡರಾತ್ರಿ 2 ಗಂಟೆಗೆ ಮನೆಯಲ್ಲಿ ಮಲಗಿದ್ದಾಗ 12 ಜನರ ತಂಡ ಏಕಾಏಕಿ ಮನೆಯ ಮೇಲೆ ದಾಳಿ ನಡೆಸಿದೆ.
ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಮೇಲೆ ಮತ್ತೊಂದು ರೌಡಿಗಳ ತಂಡ ದಾಳಿ ನಡೆಸಿ ಕೊಲೆಗೆ ಯತ್ನಿಸಿರೋ ಘಟನೆ ಮಂಡ್ಯದಲ್ಲಿ ನಡೆದಿದೆ. ಮಾದರಹಳ್ಳ ಗ್ರಾಮದ ಅಶೋಕ್ ಪೈ ಎಂಬಾತ ರೌಡಿಶೀಟರ್ ಜಡೇಜಾ ರವಿ ಕೊಲೆ ಪ್ರಕರಣದಲ್ಲಿ ಜೈಲು ಸೇ ರಿದ್ದ. ಇತ್ತೀಚೆಗಷ್ಟೆ ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡಿದ್ದರಿಂದ ಬಿಡುಗಡೆಗೊಂಡಿದ್ದ. ಇನ್ನು ನಿನ್ನೆ ತಡರಾತ್ರಿ 2 ಗಂಟೆಗೆ ಮನೆಯಲ್ಲಿ ಮಲಗಿದ್ದಾಗ 12 ಜನರ ತಂಡ ಏಕಾಏಕಿ ಮನೆಯ ಮೇಲೆ ದಾಳಿ ನಡೆಸಿದೆ. ಬಾಗಿಲು ಮುರಿದು ಕೊಲೆಗೆ ಯತ್ನಿಸಲಾಗಿದೆ. ಸುಮಾರು 30 ನಿಮಿಷ ರೌಡಿಗಳೊಂದಿಗೆ ಸೆಣಸಾಡಿದ ಅಶೋಕ್ ಪೈ, ಕೊನೆಗೂ ರೌಡಿಗಳಿಂದ ತಪ್ಪಿಸಿಕೊಂಡಿದ್ದಾನೆ. ವಿಷಯ ತಿಳಿದು ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕಾಮಿಸುತ್ತಿದ್ದಂತೆ ರೌಡಿಗಳ ತಂಡ ಲಾಂಗ್ , ಮೊಬೈಲ್ ಬಿಟ್ಟು ಪರಾರಿಯಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೊಲೆಗೆ ಯತ್ನಿಸಿದವರ ಪತ್ತೆಗೆ ಬಲೆ ಬೀಸಿದ್ದಾರೆ..
