ಜೈಲಿನಲ್ಲೇ ಇದ್ದುಕೊಂಡು ಚೇಲಾಗಳಿಗೆ ಚಮಕ್ ಕೊಡ್ಸಿ ಸುಲಿಗೆ ಮಾಡುತ್ತಿದ್ದ ರೌಡಿ ನಟರಾಜ್ ಅಲಿಯಾಸ್ ಮುಳ್ಳು ಟೀಂ ಅಂದರ್ ಆಗಿದೆ. 

ಬೆಂಗಳೂರಿನ ಕೆ ಪಿ ಅಗ್ರಹಾರ ರೌಡಿ ನಟರಾಜ್ ಐನಾತಿ ಐಡಿಯಾ ಬೆಳಕಿಗೆ ಬಂದಿದೆ. ಜೈಲಿನಲ್ಲೇ ಇದ್ದುಕೊಂಡು ಕಾಂಟ್ರ್ಯಾಕ್ಟರ್ ಶಾಂತಕುಮಾರ್ ಕಿಡ್ನಾಪ್ ಮಾಡಿಸಿದ್ದ ರೌಡಿ ಮುಳ್ಳು. ಚೇಲಗಳಾದ ಕಾರ್ತಿಕ್, ಭೈರೇಗೌಡ, ಸುರೇಶ್ ಸೇರಿದಂತೆ ಐವರು ಆರೋಪಿಗಳು ಮುಳ್ಳುಗೆ ಸಾಥ್ ನೀಡಿದ್ದಾರೆ. 

ಶಾಂತಕುಮಾರ್ ರನ್ನು ಕಿಡ್ನಾಪ್ ಮಾಡಿ ಕಾಲಿಗೆ ಚಾಕು ಹಾಕಿ ಎರಡೂವರೆ ಲಕ್ಷ ಕಿತ್ತುಕೊಂಡಿದೆ. ಕಿಡ್ನಾಪ್ ಬಳಿಕ ಹಣ ಪಡೆದು ಶಾಂತಕುಮಾರ್ ರನ್ನು ಅಪಹರಣಕಾರರು ಮನೆಗೆ ಬಿಟ್ಟು ಹೋಗಿದ್ದಾರೆ. ಘಟನೆಯ ಬಳಿಕ ಪೊಲೀಸ್ ಠಾಣೆಯ ಮೆಟ್ಟಿಲೇರದೇ ಶಾಂತಕುಮಾರ್ ಸುಮ್ಮನಾಗಿದ್ದರು. 

ಕುಡಿದ ಮತ್ತಿನಲ್ಲಿ ಶಾಂತಕುಮಾರ್ ತನ್ನ ಸ್ನೇಹಿತರ ಬಳಿ ತನ್ನನ್ನು ಅಪಹರಿಸಿದ್ದ ಬಗ್ಗೆ ಹೇಳಿದ್ದರು.  ಈ ವಿಚಾರ ತಿಳಿದ ಕೆಪಿ ಅಗ್ರಹಾರ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ.