ಆಟೋದಲ್ಲಿ ಬಂದ ಐವರು ರೌಡಿಗಳು ರಾಜಾಜಿನಗರ ಕೇಕ್ ಪ್ಯಾಲೇಸ್ ಹಾಗೂ ಅನನ್ಯ ಆಸ್ಪತ್ರೆಗಳ ಬಳಿ ಸಿಕ್ಕಸಿಕ್ಕ ಸಾರ್ವಜನಿಕರ ಮೇಲೆ ಲಾಂಗ್ ಬೀಸಿದ್ದಾರೆ.

ಬೆಂಗಳೂರು(ಮಾ.02): ಹಾಡಹಗಲೆ ರೌಡಿಗಳು ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿದ ಘಟನೆ ರಾಜಾಜಿನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಟೋದಲ್ಲಿ ಬಂದ ಐವರು ರೌಡಿಗಳು ರಾಜಾಜಿನಗರ ಕೇಕ್ ಪ್ಯಾಲೇಸ್ ಹಾಗೂ ಅನನ್ಯ ಆಸ್ಪತ್ರೆಗಳ ಬಳಿ ಸಿಕ್ಕಸಿಕ್ಕ ಸಾರ್ವಜನಿಕರ ಮೇಲೆ ಲಾಂಗ್ ಬೀಸಿದ್ದಾರೆ. ರೌಡಿಗಳ ಆರ್ಬಟಕ್ಕೆ 8 ಮಂದಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಣ್ಣೆ ಅಥವಾ ಗಾಂಜಾ ಮತ್ತಿನಲ್ಲಿ ಲಾಂಗ್ ಬೀಸಿರುವ ಸಾಧ್ಯತೆಯಿದ್ದು, ರೌಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.