ಈಗಾಗಲೇ ‘ ವಿಷ್ಣುವರ್ಧನ್‌ 2' ಶೀರ್ಷಿಕೆಯಲ್ಲಿ ಒಂದು ಚಿತ್ರ ತೆರೆಕಂಡಿದೆ. ಇದೇ ಶೀರ್ಷಿಕೆಯನ್ನು ಮತ್ತೊಮ್ಮೆ ನೀಡಲು ಬರುವುದಿಲ್ಲ. ವಾಣಿಜ್ಯ ಮಂಡಳಿ ಪ್ರಕಾರ ಒಂದೇ ಶೀರ್ಷಿಕೆ ಮರು ಬಳಕೆಗೆ ಹತ್ತು ವರ್ಷ ಆಗಲೇಬೇಕು. ಈ ಹಿನ್ನೆಲೆಯಲ್ಲಿ ತಾವು ಪರ್ಯಾಯ ಶೀರ್ಷಿಕೆ ಸೂಚಿಸುವಂತೆ ವಾಣಿಜ್ಯ ಮಂಡಳಿಯು ಹೊಯ್ಸಳ ಫಿಲಂಸ್‌ಗೆ ತಿಳಿಸಿದೆ.

ಬೆಂಗಳೂರು: ‘ಲೀಡರ್‌' ಚಿತ್ರದ ಶೀರ್ಷಿಕೆಯ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮತ್ತೊಂದು ಚಿತ್ರದ ಟೈಟಲ್‌ ವಿವಾದ ಸೃಷ್ಟಿಯಾಗಿದೆ. ಹೊಯ್ಸಳ ಫಿಲಂಸ್‌ ಸಂಸ್ಥೆ ನೋಂದಣಿ ಕೋರಿ ಸಲ್ಲಿಸಿದ್ದ ‘ಸನ್ನಾಫ್‌ ವಿಷ್ಣುವರ್ಧನ್‌' ಟೈಟಲ್‌ಗೆ ಅನುಮತಿ ನೀಡಲು ವಾಣಿಜ್ಯ ಮಂಡಳಿ ನಿರಾಕರಿಸಿದೆ.

ಈಗಾಗಲೇ ‘ ವಿಷ್ಣುವರ್ಧನ್‌ 2' ಶೀರ್ಷಿಕೆಯಲ್ಲಿ ಒಂದು ಚಿತ್ರ ತೆರೆಕಂಡಿದೆ. ಇದೇ ಶೀರ್ಷಿಕೆಯನ್ನು ಮತ್ತೊಮ್ಮೆ ನೀಡಲು ಬರುವುದಿಲ್ಲ. ವಾಣಿಜ್ಯ ಮಂಡಳಿ ಪ್ರಕಾರ ಒಂದೇ ಶೀರ್ಷಿಕೆ ಮರು ಬಳಕೆಗೆ ಹತ್ತು ವರ್ಷ ಆಗಲೇಬೇಕು. ಈ ಹಿನ್ನೆಲೆಯಲ್ಲಿ ತಾವು ಪರ್ಯಾಯ ಶೀರ್ಷಿಕೆ ಸೂಚಿಸುವಂತೆ ವಾಣಿಜ್ಯ ಮಂಡಳಿಯು ಹೊಯ್ಸಳ ಫಿಲಂಸ್‌ಗೆ ತಿಳಿಸಿದೆ.

ವಾಣಿಜ್ಯ ಮಂಡಳಿಯ ಈ ಕ್ರಮವನ್ನು ಹೊಯ್ಸಳ ಫಿಲಂಸ್‌ ಸಂಸ್ಥೆಯ ಮಾಲೀಕ ಹಾಗೂ ನಿರ್ಮಾಪಕ ಶ್ರೀನಿವಾಸ ಮೂರ್ತಿ ವಿರೋಧಿಸಿದ್ದಾರೆ. ವಾಣಿಜ್ಯ ಮಂಡಳಿಯ ಈ ಕ್ರಮ ದುರುದ್ದೇಶಪೂರ್ವಕವಾಗಿದೆ. ಗಣ್ಯ ವ್ಯಕ್ತಿಗಳ ಹೆಸರನ್ನು ಶೀರ್ಷಿಕೆಗೆ ಬಳಸುವುದು ಸರಿಯಲ್ಲ ಎಂದು ಹೇಳಿದೆ. ಆದರೆ ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ‘ರಾಜ್‌-ವಿಷ್ಣು' ಮತ್ತು ‘ಮಿಸ್ಟರ್‌ ಮೋದಿ' ಹೆಸರಲ್ಲಿ ಶೀರ್ಷಿಕೆ ನೋಂದಣಿ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ವಾಣಿಜ್ಯ ಮಂಡಳಿ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.