ಸೆಂಟ್‌ ಆಲ್ಫೋನ್ಸಾ ಪಬ್ಲಿಕ್‌ ಶಾಲೆ ಇತ್ತೀಚೆಗೆ ಹೆಣ್ಣುಮಕ್ಕಳ ಸಮವಸ್ತ್ರ ಬಿಡುಗಡೆ ಮಾಡಿತ್ತು. ಇದನ್ನು ಫೋಟೋಗ್ರಾಫರ್‌ ಒಬ್ಬರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಶಾಲಾ ಸಮವಸ್ತ್ರದ ವಿನ್ಯಾಸ ಅಶ್ಲೀಲವಾಗಿದೆ. ಜನರ ಗಮನವನ್ನು ಸೆಳೆಯುವಂತೆ ವಸ್ತ್ರ ವಿನ್ಯಾಸ ಮಾಡಲಾಗಿದೆ ಎಂದು ದೂರಿದ್ದರು.
ಸೆಂಟ್ ಆಲ್ಫೋನ್ಸಾ ಪಬ್ಲಿಕ್ ಶಾಲೆ ಇತ್ತೀಚೆಗೆ ಹೆಣ್ಣುಮಕ್ಕಳ ಸಮವಸ್ತ್ರ ಬಿಡುಗಡೆ ಮಾಡಿತ್ತು. ಇದನ್ನು ಫೋಟೋಗ್ರಾಫರ್ ಒಬ್ಬರು ಫೇಸ್ಬುಕ್ನಲ್ಲಿ ಪ್ರಕಟಿಸಿ, ಶಾಲಾ ಸಮವಸ್ತ್ರದ ವಿನ್ಯಾಸ ಅಶ್ಲೀಲವಾಗಿದೆ. ಜನರ ಗಮನವನ್ನು ಸೆಳೆಯುವಂತೆ ವಸ್ತ್ರ ವಿನ್ಯಾಸ ಮಾಡಲಾಗಿದೆ ಎಂದು ದೂರಿದ್ದರು.
ಈ ಫೋಟೋ ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಪುರುಷರೇ ಈ ಸಮವಸ್ತ್ರ ವಿನ್ಯಾಸವನ್ನು ಟೀಕಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಮಾತ್ರ ಸಮವಸ್ತ್ರ ವಿನ್ಯಾಸವನ್ನು ಸಮರ್ಥಿಸಿಕೊಂಡಿದೆ.
