ರೋಹಿಂಗ್ಯ ಉಗ್ರರಿಂದ 53 ಹಿಂದುಗಳ ಹತ್ಯೆ

Rohingyas brutally killed 53 Hindus
Highlights

ಕಳೆದ ವರ್ಷ ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಉಂಟಾದ ಜನಾಂಗೀಯ ಗಲಭೆಯ ವೇಳೆ ರೋಹಿಂಗ್ಯ ಉಗ್ರರು ಹಿಂದುಗಳ ಸಾಮೂಹಿಕ ಹತ್ಯಾಕಾಂಡ ನಡೆಸಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಬಹಿರಂಗಪಡಿಸಿದೆ.

ಯಾಂಗೋನ್: ಕಳೆದ ವರ್ಷ ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಉಂಟಾದ ಜನಾಂಗೀಯ ಗಲಭೆಯ ವೇಳೆ ರೋಹಿಂಗ್ಯ ಉಗ್ರರು ಹಿಂದುಗಳ ಸಾಮೂಹಿಕ ಹತ್ಯಾಕಾಂಡ ನಡೆಸಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಬಹಿರಂಗಪಡಿಸಿದೆ.

2017 ರ ಆಗಸ್ಟ್25 ರಂದು ರೋಹಿಂಗ್ಯ ಉಗ್ರರು 53  ಹಿಂದು ಗ್ರಾಮಸ್ಥರನ್ನು ಹತ್ಯೆ ಮಾಡಿದ್ದು, ಅದೇ ವೇಳೆಯಲ್ಲಿ ರೋಹಿಂಗ್ಯಾ ಬಂಡಾಯಗಾರರು ಪೊಲೀಸ್ ನೆಲೆಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದ್ದರು.

ಹೀಗಾಗಿ ಜನಾಂಗೀಯ ಶುದ್ಧೀಕರಣ ಕಾರ್ಯಾಚರಣೆಗೆ ಇಳಿದ ಮ್ಯಾನ್ಮಾರ್ ಸೇನೆ 7,00, 000 ರೋಹಿಂಗ್ಯ ಮುಸ್ಲಿಮರನ್ನು ಮ್ಯಾನ್ಮಾರ್‌ ನಿಂದ ಹೊರಗಟ್ಟಿತ್ತು. ಇದು ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿತ್ತು.  

ಈ ಗಲಭೆಯ ವೇಳೆ ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ ಎಂದೇ ಕರೆಯಲಾಗುವ ರೋಹಿಂಗ್ಯ ಉಗ್ರರು ಉತ್ತರ ರಾಖೈನ್‌ನ ಖಮಾಂಗ್ ಸಿಕ್ ಗ್ರಾಮದಲ್ಲಿ ಹಿಂದುಗಳನ್ನು ಸಾಮೂಹಿಕ ಮರಣದಂಡನೆ ಶೈಲಿಯಲ್ಲಿ ಹತ್ಯೆ ಮಾಡಿತ್ತು. ಇವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ತನಿಖಾ ವರದಿ ಖಚಿತಪಡಿಸಿದೆ.

loader