‘ರಾಜಕೀಯ ಕ್ಷೇತ್ರಕ್ಕೆ ನಾನು ಪ್ರವೇಶಿಸುವು ದಿಲ್ಲ. ಚಿತ್ರರಂಗದಿಂದ ಯಾರೇ ರಾಜಕೀಯಕ್ಕೆ ಬಂದರೂ ಅವರಿಗೆ ಬೆಂಬಲ ನೀಡುತ್ತೇನೆ’ ಎಂದು ಖ್ಯಾತ ಚಿತ್ರನಟ ‘ರಾಕಿಂಗ್ ಸ್ಟಾರ್; ಯಶ್ ತಿಳಿಸಿದರು.
ವಿಜಯಪುರ(ಅ.08): ‘ರಾಜಕೀಯ ಕ್ಷೇತ್ರಕ್ಕೆ ನಾನು ಪ್ರವೇಶಿಸುವು ದಿಲ್ಲ. ಚಿತ್ರರಂಗದಿಂದ ಯಾರೇ ರಾಜಕೀಯಕ್ಕೆ ಬಂದರೂ ಅವರಿಗೆ ಬೆಂಬಲ ನೀಡುತ್ತೇನೆ’ ಎಂದು ಖ್ಯಾತ ಚಿತ್ರನಟ ‘ರಾಕಿಂಗ್ ಸ್ಟಾರ್; ಯಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಕ್ಷೇತ್ರಕ್ಕೆ ನಾನು ಪ್ರವೇಶಿಸುವ ವಿಚಾರವೇ ಇಲ್ಲ ಎಂದರು. ಚಿತ್ರನಟ ಉಪೇಂದ್ರ ಅವರ ರಾಜಕೀಯ ಪ್ರವೇಶ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಯಶ್, ಚಿತ್ರರಂಗದಿಂದ ಯಾರೇ ರಾಜಕೀಯ ರಂಗ ಪ್ರವೇಶಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ. ಆದರೆ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲರೂ ಒಂದೇ ಜಾತಿ, ಎಲ್ಲರದೂ ಒಂದೇ ‘ರ್ಮ, ಅದೇ ಮಾನವ ಜಾತಿ, ಮಾನವೀಯ ಧರ್ಮ ಎಂದರು. ಇದೇ ವೇಳೆ ನಟಿ ರಾಧಿಕಾ ಪಂಡಿತ್ ಮಾತನಾಡಿ, ಮದುವೆ ನಂತರ ಮತ್ತೆ ಚಿತ್ರದಲ್ಲಿ ನಟಿಸುತ್ತೇನೆ, ರಾಕ್'ಲೈನ್ ಬ್ಯಾನರ್'ನಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದೇನೆ. ಎರಡನೇ ಸಾರಿ ವಿಜಯಪುರಕ್ಕೆ ಬಂದಿದ್ದೇನೆ ಎಂದರು.
