ಚರಂಡಿ ಸ್ವಚ್ಛಗೊಳಿಸಲು ಗುಂಡಿಗೆ ಇಳಿದ ವೇಳೆ ಕಾರ್ಮಿಕರು ಸಾವನ್ನಪ್ಪುವ ಪ್ರಕರಣ ದೇಶಾದ್ಯಂತ ಹೆಚ್ಚುತ್ತಿರುವ ನಡುವೆಯೇ, ಇಂತಹ ಸಾವು ತಪ್ಪಿಸುವ ಉದ್ದೇಶದಿಂದ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ರೋಬೊಟ್‌ ತಂತ್ರಜ್ಞಾನ ಬಳಸಲು ಕೇರಳ ಸರ್ಕಾರ ನಿರ್ಧರಿಸಿದೆ.

ತಿರುವನಂತಪುರಂ: ಚರಂಡಿ ಸ್ವಚ್ಛಗೊಳಿಸಲು ಗುಂಡಿಗೆ ಇಳಿದ ವೇಳೆ ಕಾರ್ಮಿಕರು ಸಾವನ್ನಪ್ಪುವ ಪ್ರಕರಣ ದೇಶಾದ್ಯಂತ ಹೆಚ್ಚುತ್ತಿರುವ ನಡುವೆಯೇ, ಇಂತಹ ಸಾವು ತಪ್ಪಿಸುವ ಉದ್ದೇಶದಿಂದ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ರೋಬೊಟ್‌ ತಂತ್ರಜ್ಞಾನ ಬಳಸಲು ಕೇರಳ ಸರ್ಕಾರ ನಿರ್ಧರಿಸಿದೆ.

ಮ್ಯಾನ್‌ಹೋಲ್‌ಗಳನ್ನು ರೋಬೊಟ್‌ ಸ್ವಚ್ಛಗೊಳಿಸುವ ಪ್ರಾಯೋಗಿಕ ಪರೀಕ್ಷೆ ಇತ್ತೀಚೆಗಷ್ಟೇ ರೋಬೊಟಿಕ್ಸ್‌ ಕಂಪೆನಿಯಿಂದ ನಡೆದಿದೆ. ಮುಂದಿನ ವಾರ ಕಾರ್ಯ ಯೋಜನೆ ಆರಂಭವಾಗಲಿದೆ ಎಂದು ಕೇರಳ ನೀರಾವರಿ ಪ್ರಾಧಿಕಾರ ಆಡಳಿತ ನಿರ್ದೇಶಕ ಶೈನಾಮೋಳ್‌ ಹೇಳಿದ್ದಾರೆ.

ರೋಬೊಟ್‌ ವೈಫೈ, ಬ್ಲೂಟೂತ್‌ ಮತ್ತು ಕಂಟ್ರೋಲ್‌ ಪ್ಯಾನೆಲ್‌ಗಳ ಮೂಲಕ ಇದು ನಿಯಂತ್ರಿಸಲ್ಪಡುತ್ತದೆ. ನಾಲ್ಕು ಕೈಗಳು, ಬಕೆಟ್‌ ವ್ಯವಸ್ಥೆ ಅಳವಡಿಸಲಾಗಿರುವ ಸ್ಪೈಡರ್‌ ಜಾಲ ಇದರಲ್ಲಿದೆ.