ರಾಜಾಜಿನಗರದ ಚೆಮ್ಮನೂರು ಜ್ಯೂವೆಲರಿ ಬಳಿ ಇಂದು ಸಂಜೆ ಸುಮಾರಿಗೆ ಕಳ್ಳರ ಗುಂಪು ಮಾರಕಾಸ್ತ್ರಗಳೊಂದಿಗೆ  ದರೋಡೆಗೆ ಆಗಮಿಸಿದ್ದಾರೆ.

ಬೆಂಗಳೂರು(ಫೆ.19): ಸಿಲಿಕಾನ್ ಸಿಟಿಯಲ್ಲಿ ಸಂಜೆ ವೇಳೆ ಗುಂಡಿನ ಶಬ್ದ ಚಿಮ್ಮಿದೆ. ಆಭರಣ ದರೋಡೆಗೆ ಬಂದ ದರೋಡೆಕೋರರ ಮೇಲೆ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ರಾಜಾಜಿನಗರದ ಚೆಮ್ಮನೂರು ಜ್ಯೂವೆಲರಿ ಬಳಿ ಇಂದು ಸಂಜೆ ಸುಮಾರಿಗೆ ಕಳ್ಳರ ಗುಂಪು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಆಗಮಿಸಿದ್ದಾರೆ.

ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದರೋಡೆಗೆ ಮುಂದಾದಾಗ ಆತ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿಗೆ ಬೆಚ್ಚಿದ ದರೋಡೆಕೋರರು ಪರಾರಿಯಾಗಿದ್ದಾರೆ.