ನವದೆಹಲಿ[ಜೂ.06]: ಉದ್ಯಮಿ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿರುತ್ತಾರೆ, ಅಲ್ಲದೇ ಹಲವಾಋಉ ವೈರಲ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಅವರು ಶೇರ್ ಮಾಡಿರುವ ಫೋಟೋ ಒಂದು ಪ್ರತಿಯೊಬ್ಬರನ್ನೂ ನಗೆ ಗಡಲಲ್ಲಿ ತೇಲಿಸುವಂತಿದೆ. ಅಷ್ಟಕ್ಕೂ ಫೋಟೋದಲ್ಲೇನಿದೆ?

ಈ ಬಾರಿ ಆನಂದ್ ಮಹೀಂದ್ರ ಶೇರ್ ಮಾಡಿರುವುದು ಜಾಹೀರಾತು ಒಂದರ ಫೋಟೋ. ಬಾಡಿ ಮಸಾಜ್ ನ ಈ ಜಾಹೀರಾತು ಇದೀಗ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ರೋಡ್ ರೋಲರ್ ನ ರೋಲರ್ ಮೇಲೆ ಈ ಜಾಹೀರಾತನ್ನು ಅಂಟಿಸಿದ್ದಾರೆ. ಈ ಜಾಹೀರಾತಿನಲ್ಲಿ ಕೇವಲ 499 ರೂಪಾಯಿಗೆ ಬಾಡಿ ಮಸಾಜ್ ಆಫರ್ ಇರುವುದಾಗಿಯೂ ತಿಳಿಸಲಾಗಿದೆ.

ಈ ಫೋಟೋ ಶೇರ್ ಮಾಡಿಕೊಂಡಿರುವ ಆನಂದ್ ಮಹೀಂದ್ರ ಈ ಮಸಾಜ್ ಬಳಿಕ, ಬೇರೆ ಯಾವುದೇ ರೀತಿಯ ಮಸಾಜ್ ಮಾಡಿಸುವ ಸಗತ್ಯ ಬೀಳುವುದಿಲ್ಲ. ಇದು ಎಲ್ಲಾ ರೀತಿಯ ರೋಗಗಳಿಗೂ ಸೂಕ್ತವಾದ ಚಿಕಿತ್ಸೆ[ಈ ಜಾಹೀರಾತು ಅಂಟಿಸಿದಾತ ಅದ್ಭುತ ಹಾಸ್ಯ ಪ್ರಜ್ಞೆಯುಳ್ಳ ವ್ಯಕ್ತಿಯಾಗಿರಬಹುದು, ಇಲ್ಲವೇ ಆತ ಏನೂ ತಿಳಿಯದ ಹೆಡ್ಡನಿರಬೇಕು ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ ಹಾಗೂ ಫೋಟೋ ಶೇರ್ ಮಾಡುವಲ್ಲಿ ಮುಂಚೂಣಿಯಲ್ಲಿರುವ ಆನಂದ್ ಮಹೀಂದ್ರರಿಗೆ ಟ್ವಿಟರ್ ನಲ್ಲಿ ಸುಮಾರು 7 ಮಿಲಿಯನ್ ಹಿಂಬಾಲಕರಿದ್ದಾರೆ.