ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ : ಭೀಕರ ಅಪಘಾತದಲ್ಲಿ 18 ಜನ ದುರ್ಮರಣ

news | Tuesday, April 10th, 2018
Suvarna Web Desk
Highlights

ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಮಹಾರಾಷ್ಟ್ರದ ಖಂಡಾಲ ಘಾಟ್ ಪ್ರದೇಶದಲ್ಲಿ  ಭೀಕರ ಅಪಘಾತ ಸಂಭವಿಸಿದೆ.

ಖಂಡಾಲ : ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಮಹಾರಾಷ್ಟ್ರದ ಖಂಡಾಲ ಘಾಟ್ ಪ್ರದೇಶದಲ್ಲಿ  ಭೀಕರ ಅಪಘಾತ ಸಂಭವಿಸಿದೆ.

35ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಟ್ರಕ್ ಉರುಳಿ ಬಿದ್ದಿದ್ದು, ಈ ವೇಳೆ ಸ್ಥಳದಲ್ಲೇ 18 ಜನ ದುರ್ಮರಣವನ್ನಪ್ಪಿದ್ದಾರೆ.

ಮೂವರು ಮಕ್ಕಳು ಸೇರಿ ಒಟ್ಟು 18 ಜನ ಅಪಘಾತದಲ್ಲಿ ಸಾವಿ ಗೀಡಾಗಿದ್ದಾರೆ. ಮೃತರು ಕರ್ನಾಟಕದ ವಿಜಯಪುರದ ತಿಕೋಟಾ ನಿವಾಸಿಗಳು ಎನ್ನಲಾಗಿದೆ.    

ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದೇ ವೇಳೆ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Comments 0
Add Comment

  Related Posts

  Car Catches Fire

  video | Thursday, April 5th, 2018

  Car Catches Fire

  video | Thursday, April 5th, 2018

  CM Accident Again

  video | Tuesday, April 3rd, 2018

  CM Accident Again

  video | Tuesday, April 3rd, 2018

  Car Catches Fire

  video | Thursday, April 5th, 2018
  Suvarna Web Desk