ಡೀಸೆಲ್ ಮುಗಿದು ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈ ಓವರ್ ಮೇಲೆ ನಿಂತಿದ್ದ ವ್ಯಾಗನರ್ ಕಾರಿಗೆ ಬೈಕ್ ಸವಾರನೊಬ್ಬ  ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಿದ್ದಂತೆ ಆತನ ಮೇಲೆ ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರ್ಯಾವಲರ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಎಲೆಕ್ಟ್ರಾನಿಕ್ ಸಿಟಿ ಎಲಿವೆಟೆಡ್ ಪ್ಲೇ ಓವರ್ ಮೇಲೆ ನಡೆದಿದೆ.  ತೇಜಸ್ವಿ ಪೊನಪೋಲ್ಲಿ (32) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಬೆಂಗಳೂರು (ಜ.03): ಡೀಸೆಲ್ ಮುಗಿದು ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈ ಓವರ್ ಮೇಲೆ ನಿಂತಿದ್ದ ವ್ಯಾಗನರ್ ಕಾರಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಿದ್ದಂತೆ ಆತನ ಮೇಲೆ ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರ್ಯಾವಲರ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಎಲೆಕ್ಟ್ರಾನಿಕ್ ಸಿಟಿ ಎಲಿವೆಟೆಡ್ ಪ್ಲೇ ಓವರ್ ಮೇಲೆ ನಡೆದಿದೆ. ತೇಜಸ್ವಿ ಪೊನಪೋಲ್ಲಿ (32) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಎಲಿವೆಟೆಡ್ ಪ್ಲೇ ಓವರ್ ಮೇಲೆ 3.30 ರ ಸುಮಾರಿನಲ್ಲಿ ಕೆಂಪು ಬಣ್ಣದ ವ್ಯಾಗನಾರ್ ಕಾರು ಡೀಸೆಲ್ ಮುಗಿದು ನಿಂತಿತ್ತು. ಹಿಂದಿನಿಂದ ವೇಗವಾಗಿ ಬಂದ ಬೈಕ್ ಸವಾರ ಮೊದಲು ಕಾರಿಗೆ ಗುದ್ದಿ ಕೆಳಗೆ ಬಿದ್ದಿದ್ದು ಹಿಂದಿನಿಂದ ಬಂದ ಟಿಟಿ ವಾಹನ ಹರಿದು ಸ್ಥಳದಲ್ಲೇ ತೇಜಸ್ವಿ ಸಾವನಪ್ಪಿದ್ದಾನೆ. ಇನ್ನು ಘಟನೆಯಿಂದಾಗಿ ಫ್ಲೈ ಓವರ್ ಮೇಲೆ ಕಿಲೋಮೀಟರ್ ಉದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಎಲಿವೆಟೆಡ್ ಪ್ಲೇ ಓವರ್ ಮೇಲೆ ಪದೇ ಪದೇ ಇದೆ ರೀತಿಯ ಅಪಘಾತಗಳು ಸಂಭವಿಸುತ್ತಿದ್ದು ಹೆದ್ದಾರಿ ಪ್ರಾಧಿಕಾರ ಈ ಪ್ಲೇ ಓವರ್ ಅನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಇಂತಹ ಘಟನೆಗೆ ಕಾರಣವಾಗಿದೆ. ಇಂದು ಸಹ ಡೀಸೆಲ್ ಮುಗಿದಿದ್ದ ಕಾರಿನ ಮಾಲೀಕರು ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ವಾಹನವನ್ನು ತೆರವುಗೊಳಿಸಲು ಮುಂದಾಗದಿರುವುದೇ ಇಂದಿನ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.