Asianet Suvarna News Asianet Suvarna News

ಮಳೆಗಾಲದಲ್ಲಿ ಚಿನ್ನ ಕೊಡುತ್ತಂತೆ ಈ ನದಿ: ಪ್ರವಾಹದ ನಿರೀಕ್ಷೆಯಲ್ಲಿರುತ್ತಾರೆ ಇಲ್ಲಿನ ಜನರು!

ಬಿರುಬಿಸಿಲಿನಿಂದ ರಿಲೀಫ್ ಸಿಗಲಿ ಎಂಬ ನಿಟ್ಟಿನಲ್ಲಿ ಮುಂಗಾರಿನ ನಿರೀಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಬಿಹಾರದ ಪಶ್ಚಿಮದಲ್ಲಿರುವ ರಾಮನಗರ ಎಂಬ ಹಳ್ಳಿಯ ಜನರಿಗೆ ಈ ಮುಂಗಾರು ಮಳೆಯ ಸಂದರ್ಭದಲ್ಲಿ ಚಿನ್ನ ಸಿಗುತ್ತದೆಯಂತೆ. ಈ ವಿಚಾರವನ್ನು ಕೇಳಿ ಶಾಕ್ ಆಗುತ್ತದೆಯಾದರೂ, ನಿಜವೆಂಬ ಮಾತುಗಳು ಕೇಳಿ ಬಂದಿವೆ. ಇನ್ನು ಈ ಚಿನ್ನ ಇವರಿಗೆ ನದಿಯಲ್ಲಿ ಸಿಗುತ್ತದೆ ಎಂದು ತಿಳಿದು ಬಂದಿದೆ.

rivers bring gold with flood in bihar
  • Facebook
  • Twitter
  • Whatsapp

ನವದೆಹಲಿ(ಜೂ.07): ಬಿರುಬಿಸಿಲಿನಿಂದ ರಿಲೀಫ್ ಸಿಗಲಿ ಎಂಬ ನಿಟ್ಟಿನಲ್ಲಿ ಮುಂಗಾರಿನ ನಿರೀಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಬಿಹಾರದ ಪಶ್ಚಿಮದಲ್ಲಿರುವ ರಾಮನಗರ ಎಂಬ ಹಳ್ಳಿಯ ಜನರಿಗೆ ಈ ಮುಂಗಾರು ಮಳೆಯ ಸಂದರ್ಭದಲ್ಲಿ ಚಿನ್ನ ಸಿಗುತ್ತದೆಯಂತೆ. ಈ ವಿಚಾರವನ್ನು ಕೇಳಿ ಶಾಕ್ ಆಗುತ್ತದೆಯಾದರೂ, ನಿಜವೆಂಬ ಮಾತುಗಳು ಕೇಳಿ ಬಂದಿವೆ. ಇನ್ನು ಈ ಚಿನ್ನ ಇವರಿಗೆ ನದಿಯಲ್ಲಿ ಸಿಗುತ್ತದೆ ಎಂದು ತಿಳಿದು ಬಂದಿದೆ.

ಇಲ್ಲಿನ ಬಲುಯೀ, ಕಾಪನ್ ಹಾಗೂ ಸೋನ್ಹಾ ಎಂಬ ಮೂರು ನದಿಗಳೇ ಜನರಿಗೆ ಮುಂಗಾರಿನ ಸಮಯದಲ್ಲಿ ಚಿನ್ನ ನೀಡುತ್ತಿವೆ. ನದಿ ನೀರಿನಲ್ಲಿರುವ ಚಿನ್ನವನ್ನು ಆಯ್ದು ಇಲ್ಲಿನ ಜನರು ವರ್ಷವಿಡೀ ಹೊಟ್ಟೆ ತುಂಬಿಸುತ್ತಾರಂತೆ. ಆದರೆ ಇದು ಅಷ್ಟೇನೂ ಸುಲಭದ ಮಾತಲ್ಲ, ಯಾಕೆಂದರೆ ಬಿಹಾರದಲ್ಲಿ ಮುಂಗಾರಿನ ವೇಳೆ ಬರುವ ಪ್ರವಾಹ ಅತ್ಯಂತ ದೊಡ್ಡ ಸಮಸ್ಯೆ. ಪ್ರವಾಹ ಬಂದರೆ ಈ ನದಿಗಳಲ್ಲೂ ನೀರು ತುಂಬಿ ಹರಿಯುತ್ತದೆ. ಹೀಗಾಗಿಯೇ ಇಲ್ಲಿನ ಜನರು ಪ್ರವಾಹ ಕಡಿಮೆಯಾಗಲು ಕಾತುರದಿಂದ ಕಾತಯುತ್ತಾರೆ. ನೀರು ಕಡಿಮೆಯಾಗುತ್ತಿದ್ದಂತೆಯೇ ಕೆಲ ವಿಶೇಷ ಉಪಕರಣಗಳೊಂದಿಗೆ ನದಿಗಿಳಿಯುವ ಜನರು ಪ್ರವಾಹದಲ್ಲಿ ಕೊಚ್ಚಿ ಬಂದ ವಸ್ತುಗಳನ್ನು ಆಯ್ದು ತರುತ್ತಾರೆ. ಬಳಿಕ ಿವುಗಳಿಂದ ಚಿನ್ನವನ್ನು ಬೇರ್ಪಡಿಸಿ ಪಟ್ಟಣದಲ್ಲಿ ಮಾರಿ ಮಾರುತ್ತಾರೆ.

ಹಿಂದಿನಿಂದಲೂ ಇದೇ ಕೆಲಸ:

ಈ ವಿಚಾರ ಓದಿ ನಿಜಕ್ಕೂ ದಂಗಾಗುತ್ತೇವೆ. ಆದರೆ ಆ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ಜನರು ಇದೇ ಕಾಯಕದಲ್ಲಿ ತೊಡಗಿಕೊಂಡಿದ್ದಾರಂತೆ. ಅರಣ್ಯ ಹಾಗೂ ಬೆಟ್ಟಗಾಡಿನ ಪ್ರದೇಶದಲ್ಲಿ ಆದಿವಾಸಿ ಜನಾಂಗದವರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಇನ್ನು ಹಲವಾರು ಬಾರಿ ಜನರು ನದಿಗಿಳಿದು ಚಿನ್ನಕ್ಕಾಗಿ ದಿನವಿಡೀ ಶೋಧ ನಡೆಸಿದರೂ ಒಂದು ಚಿಕ್ಕ ತುಣುಕು ಕೂಡಾ ಸಿಗದೆ ವಾಪಾಸಾಗುವ ುದಾಹರಣೆಗಳು ಇವೆಯಂತೆ.

ಪರಿಶ್ರಮಪಟ್ಟರೂ ಸೂಕ್ತ ಬೆಲೆ ಸಿಗುವುದಿಲ್ಲ:

ಇಷ್ಟೆಲ್ಲಾ ಕಷ್ಟಪಟ್ಟು ಚಿನ್ನದ ತುಣುಕುಗಳನ್ನು ಜನರು ಮಾರುಕಟ್ಟೆಗೆ ಮಾರಲು ಕೊಂಡೊಯ್ದರೂ ಅಲ್ಲಿನ ಚಿನ್ನದ ವ್ಯಾಪಾರಿಗಳು ಸೂಕ್ತ ಬೆಲೆ ನೀಡುವುದು ಬಹಳ ವಿರಳವಂತೆ. 

ಕೃಪೆ: NDTv

Follow Us:
Download App:
  • android
  • ios