ನವದೆಹಲಿ (ಸೆ.10): ರಿಯೋ ಪ್ಯಾರಾ ಒಲಂಪಿಕ್ಸ್’ನಲ್ಲಿ ಟಿ-42 ಹೈ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದ ಮರಿಯಪ್ಪನ್ ತಂಗವೇಲುರವರಿಗೆ 2 ಕೋಟಿ ಬಹುಮಾನ ಕೊಡುವುದಾಗಿ ತಮಿಳುನಾಡು ಸಿಎಂ ಜಯಲಲಿತಾ ಘೋಷಿಸಿದ್ದಾರೆ.

Scroll to load tweet…

1.89 ಗೂ ಎತ್ತರ ಜಿಗಿದು ನೀವು ಇತಿಹಾಸ ಸೃಷ್ಟಿಸಿದ್ದೀರಿ. ಇಡೀ ದೇಶ ಮತ್ತು ತಮಿಳುನಾಡಿಗೆ ಇದು ಹೆಮ್ಮೆಯ ಸಂಗತಿ. ಎಲ್ಲಾ ನ್ಯೂನತೆಯನ್ನು ಮೀರಿ ನೀವು ಸಾಧನೆ ಮಾಡಿದ್ದೀರಿ. ಇದು ಎಲ್ಲಾ ಕ್ರೀಡಾಳುಗಳಿಗೆ ಸ್ಪೂರ್ತಿಯನ್ನು ನೀಡುತ್ತದೆ. ಇದೊಂದು ದೊಡ್ಡ ಸಾಧನೆ ಎಂದು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.