ನವದೆಹಲಿ(ಸೆ.10): ರಿಯೋ ಪ್ಯಾರಾಲಿಂಪಿಕ್ಸ್'ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಭಾರತದ ರಾಷ್ಟ್ರಗೀತೆಯನ್ನು ಸಾಂಬನಾಡಿನಲ್ಲಿ ಮೊಳಗಿಸಿದ ಸಾಧನೆ ಮಾಡಿದ ಮರಿಯಪ್ಪನ್ ತಂಗವೇಲು ಮತ್ತು ವರುಣ್ ಭಾಟಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ರಿಯೊ ಪ್ಯಾರಾಲಿಂಪಿಕ್ಸ್ ನ ಟಿ42 ಹೈಜಂಪ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ 21 ವರ್ಷದ ತಂಗವೇಲು ದಾಖಲೆ ಸೃಷ್ಟಿಸಿದ್ದಾರೆ ಮತ್ತು ಕಂಚಿನ ಪದಕ ಗೆದ್ದ ವರುಣ್ ಭಾಟಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಟ್ವೀಟರ್ ಮೂಲಕ ಈ ಇಬ್ಬರು ಸ್ಪರ್ಧಿಗಳಿಗೆ ಶುಭಾಷಯ ತಿಳಿಸಿದಿರುವ ಮೋದಿ, ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
